ಬಡತನದಲ್ಲಿ ಬೆಳೆದು ಸಾಧನೆ ಮಾಡುವುದು ಹೆಮ್ಮೆ

UNTILETED 11
ಕೂಡ್ಲಿಗಿ ತಾಲೂಕಿನ ಬಂಡೇ ಬಸಾಪುರ ತಾಂಡಕ್ಕೆ ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸದಸ್ಯ ಎಂ.ಲೋಕೇಶ್ವರ ನಾಯ್ಕ ಭೇಡಿ ನೀಡಿದ್ದರು. ಸಮುದಾಯದ ಪ್ರಮುಖರಾದ ಎಲ್. ಪವಿತ್ರಾಬಾಯಿ, ದಿನೇಶ್ ನಾಯ್ಕ, ಶಿವಕುಮಾರ್ ನಾಯ್ಕ, ಕುಮಾರ ನಾಯ್ಕ, ರಾಮು ನಾಯ್ಕ, ಧನಂಜಯ ನಾಯ್ಕ, ವೀರೇಶ್ ನಾಯ್ಕ, ಮಂಜು ನಾಯ್ಕ, ಕೊಟ್ರೇಶ್ ನಾಯ್ಕ ಇತರರಿದ್ದರು.
Published on

ಕೂಡ್ಲಿಗಿ: ಬಂಜಾರ ಸಮುದಾಯದ ಜನರು ವಲಸೆ ಹೋಗಿ ದುಡಿಯುವುದರೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಸದಸ್ಯ ಎಂ.ಲೋಕೇಶ್ವರ ನಾಯ್ಕ ಹೇಳಿದರು.

ಬಂಡೆ ಬಸಾಪುರ ತಾಂಡಕ್ಕೆ ಬುಧವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಚರ್ಚಿಸಿದರು. ಬಂಜಾರ ಸಮುದಾಯದವರು ಶೈಕ್ಷಣಿಕ, ಆರ್ಥಿಕವಾಗಿ ತುಂಬ ಹಿಂದುಳಿದಿದ್ದು, ಹೊಟ್ಟೆಪಾಡಿಗಾಗಿ ಕಬ್ಬು ಕಟಾವು ಮಾಡಲು ಹೋಗುತ್ತಾರೆ. ಕೂಲಿ ಕಾರ್ಮಿಕರಾಗಿ ದುಡಿಯುವ ವೇಳೆ ವಿಷ ಜಂತುಗಳು ಕಚ್ಚಿ ಅನೇಕರು ಮೃತಪಟ್ಟಿದ್ದಾರೆ. ಕಡು ಬಡತನದಲ್ಲಿ ಹುಟ್ಟಿ ಸಾಧನೆ ಮಾಡುವುದೇ ತುಂಬಾ ದೊಡ್ಡ ವಿಷಯ ಎಂದರು.

ಬಡತನದ ಬೇಗೆಯಲ್ಲಿ ಬೇಯುತ್ತಿರುವ ಬಂಜಾರ ಸಮುದಾಯದ ಯುವಕರು ಕ್ರೀಡೆಗಳಲ್ಲಿ ಆಸಕ್ತಿ ಹೊಂದಿದ್ದು, ಸಾಧನೆ ಮಾಡುವ ಮನಸ್ಸು ಇದ್ದವರಿಗೆ ನಾನು ಸರ್ಕಾರದ ಸೌಲಭ್ಯಗಳನ್ನು ಒದಗಿಸಲು ಸಹಕಾರ ನೀಡುವೆ. ಒಳಮೀಸಲಾತಿ ಜಾರಿ ಸರಿಯಲ್ಲ. ಬಂಜಾರ, ಭೋವಿ ಹಾಗೂ ಕೊರಮ ಸಮುದಾಯದ ದತ್ತಾಂಶವನ್ನು ಸರ್ಕಾರ ಮತ್ತೆ ಸಮೀಕ್ಷೆ ಮಾಡಬೇಕು ಎಂದು ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net