ಬಾಲ ಕಾರ್ಮಿಕ ಪದ್ಧತಿಯಿಂದ ಭವಿಷ್ಯ ಹಾಳು

Kudligi blood donote programe
ಕೂಡ್ಲಿಗಿ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಹಾಗೂ ವಿಶ್ವ ರಕ್ತದಾನಿಗಳ ಕಾರ್ಯಕ್ರಮಕ್ಕೆ ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ ಚಾಲನೆ ನೀಡಿದರು. ಟಿಎಚ್‌ಒ ಡಾ. ಎಸ್.ಪಿ. ಪ್ರದೀಪ್ ಕುಮಾರ್, ಸಪಪೂ ಕಾಲೇಜು ಪ್ರಾಚಾರ್ಯೆ ಕೆ.ಕೊತ್ಲಮ್ಮ, ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಎಚ್.ವೆಂಕಟೇಶ್, ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ, ಕರಿಬಸವರಾಜ ಇದ್ದರು.
Published on

ಕೂಡ್ಲಿಗಿ: ಬಡತನ, ಪಾಲಕರ ನಿರ್ಲಕ್ಷೃದ ಕಾರಣದಿಂದ ಪ್ರಪಂಚದಲ್ಲಿ ಕೋಟ್ಯಂತರ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಲೇ ಇದ್ದಾರೆ ಎಂದು ಸಹಾಯಕ ಸರ್ಕಾರಿ ಅಭಿಯೋಜಕಿ ವೈ.ಶಿಲ್ಪಾ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ಸಾರ್ವಜನಿಕ ಆಸ್ಪತ್ರೆ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಹಾಗೂ ವಿಶ್ವ ರಕ್ತದಾನಿಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿ ಬಾಲಕಾರ್ಮಿಕರನ್ನು ನಿಷೇಧಿಸಲಾಗಿದೆ. ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ಬಾಲ ಕಾರ್ಮಿಕರೆನ್ನಲಾಗಿದೆ. ಆದರೆ ಇಂದಿಗೂ ಬಡತನ ಮಕ್ಕಳನ್ನು ದುಡಿಯುವಂತೆ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಓದುವ ವಯಸ್ಸಿನಲ್ಲಿ ದುಡಿಯಲು ಹೋಗಿ ಸುಂದರವಾದ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅನಿಷ್ಟ ಪದ್ಧತಿಯನ್ನು ತೊಲಗಿಸಲು ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಆದರೆ ಯಶ ಕಾಣುತ್ತಿಲ್ಲ ಎಂದು ತಿಳಿಸಿದರು.

ವಿಶ್ವ ರಕ್ತದಾನಿಗಳ ದಿನ ಕುರಿತು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ಮಾತನಾಡಿ, ರಕ್ತವು ಎಲ್ಲ ವ್ಯಕ್ತಿಗಳಿಗೆ ಜೀವಸೆಲೆಯಾಗಿದೆ. ಇದನ್ನು ತಯಾರಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಪ್ರಕೃತಿಯ ವರವಾಗಿದೆ ಎಂದರು.ಮನುಷ್ಯನ ಪಾಲಿಗೆ ರಕ್ತ ಜೀವದ್ರವ್ಯ. ಸರಿಯಾದ ಪ್ರಮಾಣದಲ್ಲಿ ಉತ್ತಮ ರಕ್ತ ಹೊಂದಿರುವುದು ವ್ಯಕ್ತಿಯೋರ್ವ ಆರೋಗ್ಯದಿಂದಿರಲು ಅವಶ್ಯಕ. ಯಾವುದಾದರೂ ಕಾಯಿಲೆ, ಶಸ್ತ್ರಚಿಕಿತ್ಸೆ, ಅಪಘಾತ ಅಥವಾ ದುರ್ಘಟನೆಗಳು ಸಂಭವಿಸಿದ ವೇಳೆ ವ್ಯಕ್ತಿ ತನ್ನ ದೇಹದಲ್ಲಿನ ರಕ್ತವನ್ನು ಕಳೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಆತನಿಗೆ ರಕ್ತವನ್ನು ನೀಡುವ ಅನಿವಾರ್ಯ ಪರಿಸ್ಥಿತಿ ಎದುರಾಗುತ್ತದೆ. ರಕ್ತದಾನ ಮಾಡಿದರೆ ಇನ್ನೊಂದು ಅಮೂಲ್ಯ ಜೀವ ಉಳಿಸಲು ಸಾಧ್ಯ ಎಂದು ತಿಳಿಸಿದರು.

ಸಪಪೂ ಕಾಲೇಜು ಪ್ರಾಚಾರ್ಯೆ ಟಿ. ಕೊತ್ಲಮ್ಮ, ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಎಚ್.ವೆಂಕಟೇಶ್, ಪ್ಯಾನಲ್ ವಕೀಲರಾದ ಸಿ.ವಿರುಪಾಕ್ಷಪ್ಪ, ಕರಿಬಸವರಾಜ, ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕ ಕೆ.ಪ್ರಶಾಂತ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net