ಕುರುಬ ಸಮುದಾಯ ಎಸ್ಟಿಗೆ ಸೇರಿಸದಿರಿ

kdl-1
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದಿಂದ ಕೂಡ್ಲಿಗಿಯಲ್ಲಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಮಣಿ ಜಿಂಕಾಲ್, ತಾಲೂಕು ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ಕಾವಲಿ ಶಿವಪ್ಪನಾಯಕ, ಪಿ.ಪದ್ಮಾ, ಸೂರ್ಯಪಾಪಣ್ಣ, ಬಿ.ಭೀಮೇಶ್, ಕೆ.ಈಶಪ್ಪ ಇತರರಿದ್ದರು.
Published on

ಕೂಡ್ಲಿಗಿ: ಎಸ್ಟಿ ಪಟ್ಟಿಗೆ ಕುರುಬ ಸಮುದಾಯ ಸೇರಿಸಬಾರದು ಹಾಗೂ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿ.ಕೆ.ನೇತ್ರಾವತಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಕುರುಬ ಸಮುದಾಯ ಎಸ್ಟಿ ಪಟ್ಟಿಗೆ ಸೇರಿಸಲು ಯತ್ನಿಸುತ್ತಿರುವುದು ಖಂಡನೀಯ. ಆರ್ಥಿಕ, ಶೈಕ್ಷಣಿಕ, ಮತ್ತು ಸಾಮಾಜಿಕವಾಗಿ ಬಲಾಢ್ಯ ಇರುವ ಕುರುಬ ಸಮುದಾಯ ಎಸ್ಟಿ ಪಟ್ಟಿಗೆ ಸೇರಿಸಿದರೆ ವಾಲ್ಮೀಕಿ ಸಮುದಾಯ ಉಗ್ರವಾದ ಹೋರಾಟ ನಡೆಸಲಿದೆ.

ಎಸ್ಟಿ ಸಮುದಾಯ ಬುಡಕಟ್ಟು ಸಂಸ್ಕೃತಿಗೆ ಸೇರಿದ್ದು, ಈಗಲೂ ಗ್ರಾಮೀಣ ಪ್ರದೇಶಗಳಲ್ಲಿ ಹಟ್ಟಿ ಹಾಗೂ ಅರಣ್ಯಗಳಲ್ಲಿ ಪಶುಪಾಲನೆ ನಂಬಿ ಜೀವಿಸುತ್ತಿದ್ದಾರೆ. ಇನ್ನೂ ಅನೇಕರು ಪಟ್ಟಣದ ಮುಖವನ್ನೆ ನೋಡಿಲ್ಲ, ಉಡುಗೆ-ತೊಡುಗೆ ಬದಲಾಗಿಲ್ಲ.

ದೇವದಾಸಿ ಪದ್ಧತಿಯಂಥ ಮೌಢ್ಯಗಳಿಗೆ ಬಲಿಯಾಗಿ ಸಮಾಜದ ಮುಖ್ಯವಾಹಿನಿಗೆ ಬಾರದೆ ನಿಕೃಷ್ಟ ಬದುಕು ನಡೆಸುತ್ತಿದ್ದಾರೆ. ಆದರೆ, ರಾಜಕೀಯ ಲಾಭಕ್ಕಾಗಿ ಕುರುಬ ಸಮುದಾಯ ಎಸ್ಟಿಗೆ ಸೇರಿಸುತ್ತಿರುವುದು ಅಕ್ಷೇಪಾರ್ಹ.

ಈ ವಿಷಯ ಕೈಬಿಟ್ಟು ರಾಜ್ಯದಲ್ಲಿ ನಕಲಿ ಎಸ್ಟಿ ಜಾತಿ ಪ್ರಮಾಣಪತ್ರಗಳನ್ನು ಪಡೆದವರು ಮತ್ತು ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಮಣಿ ಜಿಂಕಾಲ್, ತಾಲೂಕು ಅಧ್ಯಕ್ಷ ಎಸ್.ಸುರೇಶ್, ಮುಖಂಡರಾದ ಕಾವಲಿ ಶಿವಪ್ಪನಾಯಕ, ಪಿ.ಪದ್ಮಾ, ಸೂರ್ಯಪಾಪಣ್ಣ, ಬಿ.ಭೀಮೇಶ್, ಕೆ.ಈಶಪ್ಪ, ಎಸ್.ವೆಂಕಟೇಶ, ತಳವಾರ ಶರಣಪ್ಪ, ಪಾಪ ನಾಯಕ, ಢಾಣಿ ರಾಘವೇಂದ್ರ, ಭೀಮಲಿಂಗೇಶ್, ಮಯೂರ ಮಂಜುನಾಥ, ಎಂ.ನಾಗರಾಜ, ವೆಂಕಟೇಶ್, ಗುರಿಕಾರ ರಾಘವೇಂದ್ರ, ಸಿ.ಬಿ.ರಾಘು, ವಿ.ಪ್ರಕಾಶ್, ಮಾಳ್ಗಿ ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net