ಕಾರ್ಮಿಕರನ್ನು ವಂಚಿಸುತ್ತಿದೆ ಸರ್ಕಾರ

27kudligi1
Published on

ಎಐಟಿಯುಸಿ ತಾಲೂಕು ಅಧ್ಯಕ್ಷ ಯು. ಪೆನ್ನಪ್ಪ ಆರೋಪ

ಕೂಡ್ಲಿಗಿ: ತಾಲೂಕಿನ ಗುಡೆಕೋಟೆ ಹೋಬಳಿಯ ಮಹಾದೇವಪುರದಲ್ಲಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ಗ್ರಾಮ ಘಟಕವನ್ನು ಸೋಮವಾರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ತಾಲೂಕು ಅಧ್ಯಕ್ಷ ಯು. ಪೆನ್ನಪ್ಪ ಮಾತನಾಡಿ, ಕಟ್ಟಡ ಕಾರ್ಮಿಕರ ಗ್ರಾಮ ಘಟಕ ಉದ್ಘಾಟನೆ ಈ ಗ್ರಾಮದ ಕಾರ್ಮಿಕರ ಹಿತಕ್ಕಾಗಿ ರಚಿಸಿದ್ದು, ಮಂಡಳಿಯ ಸೌಲಭ್ಯಗಳನ್ನು ನಿಗದಿತ ಸಮಯದಲ್ಲಿ ಪಡೆಯಲು ಕಾರ್ಮಿಕರಿಗೆ ಜಾಗೃತಿ ನೀಡಲು ಗ್ರಾಮ ಘಟಕ ಸ್ಥಾಪನೆ ಮಾಡಲಾಗಿದೆ. ಗ್ರಾಮದ ಎಲ್ಲಾ ಕಟ್ಟಡ ಕಾರ್ಮಿಕರು ಮಂಡಳಿಯಲ್ಲಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಸರ್ಕಾರ ಬಜೆಟ್‌ನಲ್ಲಿ ಕಟ್ಟಡ ಕಾರ್ಮಿಕರಿಗೆ ಯಾವುದೇ ಸೌಲಭ್ಯಗಳನ್ನು ನೀಡದೇ ಹಾಗೂ ಯೋಜನೆಗಳ ಅನುದಾನವನ್ನು ಹೆಚ್ಚು ಮಾಡಿಲ್ಲ. ಕಾರ್ಮಿಕರಿಗೆ ಮನೆಗಳನ್ನು ನೀಡಿಲ್ಲ. ಇರುವ ಸೌಲಭ್ಯಗಳನ್ನು ಕೂಡಾ ನಿಗದಿತ ಸಮಯದಲ್ಲಿ ನೀಡದೆ ಕಾರ್ಮಿಕರನ್ನು ವಂಚಿಸುತ್ತಿದೆ. ಈಗಾಗಲೇ ಎ ಐಟಿಯುಸಿ ರಾಜ್ಯ ಸಂಘಟನೆಯ ನೇತೃತ್ವದಲ್ಲಿ ಹೋರಾಟ ನಡೆಸಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಹಲವು ಬಾರಿ ಮನವಿ ನೀಡಿದರು ಯಾವುದೇ ಪ್ರಯೋಜವಾಗಿಲ್ಲ.

ತಾಲೂಕಿನ ಪ್ರತಿ ಗ್ರಾಮದ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ತೊಡಗಿ ಸಂಘಟಿತರಾಗಿ, ಜಾಗೃತರಾಗಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗದೆ ನಿಗದಿತ ಸಮಯದಲ್ಲಿ ಕಾರ್ಡ್‌ಗಳನ್ನು ನವೀಕರಣಗೊಳಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕಾರ್ಯದರ್ಶಿ ಎಚ್. ವೀರಣ್ಣ, ತಾಲೂಕು ಸಹ ಕಾರ್ಯದರ್ಶಿ ಮಂಜು, ಗುಡೆಕೋಟೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಲೋಕೇಶ್, ಮಂಜುನಾಥ, ಎಂ ಮಾರಣ್ಣ, ಎ. ಮಾರೇಶ, ಕೆ ರಾಜು, ವಿ ಗೋವಿಂದಪ್ಪ, ತಳವಾರ ನಾಗರಾಜ, ಜಿ. ಮಾಂತೇಶ, ಬಿ.ಕೆ.ಅಂಜಿನಿ, ಬಿ.ಕೆ. ನಾಗರಾಜ, ಪೂಜಾರಿ ಮಾರೇಶ, ಪಿ. ಬಸಣ್ಣ, ಜಿ. ರಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net