ಕೃಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳಲು ಸಲಹೆ

090522 Kudligi Charitable program
ಕೂಡ್ಲಿಗಿಯಲ್ಲಿ ಸೋಮವಾರ ಹಮ್ಮಿಕೊಂಡ ದತ್ತಿ ಕಾರ್ಯಕ್ರಮವನ್ನು ಜ್ಞಾನಮಂಟಪ ಶಿಕ್ಷಣ ಮಹಾವಿದ್ಯಾಲಯದ ಸಂಸ್ಥಾಪಕಾ ಅಧ್ಯಕ್ಷ ಜಿ.ಉಮೇಶ್ ಉದ್ಘಾಟಿಸಿದರು.
Published on

ಕೂಡ್ಲಿಗಿ: ಸುಲಭ ಹಣದ ವ್ಯಾಮೋಹಕ್ಕೆ ಕೃಷಿ ಭೂಮಿಗಳು ನಶಿಸಿ, ಕಾಂಕ್ರೀಟ್ ನಾಡಾಗುತ್ತಿರುವುದು ವಿಷಾದನೀಯ ಎಂದು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು.

ಪಟ್ಟಣದ ಗುಂಡಿನಹೊಳೆಯ ಜ್ಞಾನ ಮಂಟಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕಸಾಪ ತಾಲೂಕು ಘಟಕ ಸೋಮವಾರ ಹಮ್ಮಿಕೊಂಡ ದತ್ತಿ ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳು ಕುರಿತು ಮಾತನಾಡಿದರು. ಭಾರತವು ಕೃಷಿಯಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನ ಪಡೆದಿದೆ. ಕೃಷಿ ಉತ್ಪನ್ನಗಳ ರಪ್ತು ಮಾಡುವುದರಲ್ಲಿ ಏಳನೇ ಸ್ಥಾನ ಪಡೆದಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಕೃಷಿಗೆ ಹಿನ್ನಡೆಯಾಗುದ್ದು, ಕೃಷಿಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಕೃಷಿ ಯೋಗ್ಯಭೂಮಿಗಳು ಕೃಷಿಯೇತರ ಭೂಮಿಗಳಾಗಿ ಪರಿವರ್ತನೆ ಯಾಗುತ್ತಿದ್ದು, ಇದಕ್ಕೆ ಸರ್ಕಾರಗಳೂ ಕಾರಣ. ರಸ ಗೊಬ್ಬರ ಮತ್ತಿತರ ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿವೆ. ರೈತನು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಸಾಲಗಾರನಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆ. ಆಧುನಿಕ ಪದ್ಧತಿ ಅಳವಡಿಸಿಕೊಂಡು ಪ್ರಗತಿ ಕಾಣಬೇಕು ಎಂದರು.

ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಶ್ರೀಮತಿ ರುದ್ರಮ್ಮ ವಾಮದೇವ ಶಿವಾಚಾರ್ಯ ಮತ್ತು ಮಕ್ಕಳು ಹಾಗೂ ಡಾ.ಸಿದ್ದನಗೌಡ ಮತ್ತು ಶ್ರೀಮತಿ ಹನುಮಂತಮ್ಮ ದತ್ತಿದಾನಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ನೌಕರ ಸಂಘದ ತಾಲೂಕು ಅಧ್ಯಕ್ಷ ಪಿ.ಶಿವರಾಜ್, ಲೋಕೋಪಯೋಗಿ ಇಲಾಖೆ ಎಇ ಕೆ.ನಾಗನಗೌಡ ಉಪನ್ಯಾಸ ನೀಡಿದರು. ಮುಖ್ಯಶಿಕ್ಷಕ ಕೆ.ಎಚ್.ಎಂ.ವೀರಭದ್ರಯ್ಯ, ಜ್ಞಾನಮಂಟಪ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ ಪ್ರಾಚಾರ್ಯ ಎಸ್.ಚಾರೇಶ್, ಕಸಾಪ ಕಾರ್ಯದರ್ಶಿ ನಂದಿ ಬಸವರಾಜ್, ಉಪನ್ಯಾಸಕರಾದ ಟಿ.ಜಿ.ಶಿವಾನಂದಪ್ಪ, ಡಾ.ಎಚ್.ಟಿ.ರವಿಕುಮಾರ್, ಜಿ.ನಾಗರಾಜ್, ಮೋಹನಗಾಂಧಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net