ಸಾಕು ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಿಸಿ

Kudlgi rabis
ಗುಡೇಕೋಟೆ ಗ್ರಾಮದಲ್ಲಿ ಪಿಎಚ್‌ಸಿಯಿಂದ ವಿಶ್ವ ರೇಬಿಸ್ ದಿನಾಚರಣೆ ಜಾಗೃತಿ ಕಾರ್ಯಕ್ರಮ ನಡೆಯಿತು. ವೈದ್ಯಾಧಿಕಾರಿ ಎಚ್.ಎಂ.ಸುಮಂಗಳಾ, ಹಿರಿಯ ಆರೋಗ್ಯ ನಿರೀಕ್ಷಕಣಾಧಿಕಾರಿ ಸೈಯದ್ ವಹಾಬ್, ಸುರಕ್ಷಣಾಧಿಕಾರಿ ಮಂಜುಳಾ ಇತರರಿದ್ದರು.
Published on

ಕೂಡ್ಲಿಗಿ: ರೇಬಿಸ್ ಸೋಂಕಿನ ಬಗ್ಗೆ ನಿರ್ಲಕ್ಷಿಸದೆ ಸಕಾಲಕ್ಕೆ ಚುಚ್ಚುಮದ್ದು ಪಡೆದು ಗುಣಮುಖವಾಗಬೇಕು ಎಂದು ಗುಡೇಕೋಟೆ ಪಿಎಚ್‌ಸಿ ವೈದ್ಯಾಧಿಕಾರಿ ಎಚ್.ಎಂ.ಸುಮಂಗಳಾ ಹೇಳಿದರು.

ತಾಲೂಕಿನ ಗುಡೇಕೋಟೆ ಗ್ರಾಮದ ಪಿಎಚ್‌ಸಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ರೇಬಿಸ್ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಯಿ, ಬೆಕ್ಕು, ನರಿ, ಹಸು, ಕುರಿ, ಕುದುರೆ, ಮುಂಗುಸಿ ಹಾಗೂ ಇತರ ಕಾಡು ಪ್ರಾಣಿಗಳ ಕಡಿತದಿಂದ ರೇಬಿಸ್ ಕಾಯಿಲೆ ಹರಡುತ್ತದೆ. ಸಾಕು ನಾಯಿಗಳಿಗೆ ತಪ್ಪದೆ ರೇಬಿಸ್ ಲಸಿಕೆ ಹಾಕಿಸಬೇಕು. ನಾಯಿ ಕಡಿದ ತಕ್ಷಣವೇ ಸಾಬೂನು-ನೀರಿನಿಂದ 15 ನಿಮಿಷ ತೊಳೆಯಬೇಕು. ನಾಯಿ ಕಚ್ಚಿದ ಗಾಯಕ್ಕೆ ಮಣ್ಣು, ಅರಿಷಿನ ಪುಡಿ, ವೀಳ್ಯದೆಲೆ, ಸುಣ್ಣದಂತಹ ವಸ್ತುಗಳನ್ನು ಹಚ್ಚಬಾರದು. ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆಯಂತೆ 5 ಡೋಸ್ ರೇಬಿಸ್ ಲಸಿಕೆ ಪಡೆಯಬೇಕು ಎಂದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೈಯದ್ ವಹಾಬ್ ಮಾತನಾಡಿ, ರೇಬಿಸ್ ನಿಯಂತ್ರಣದ ಬಗ್ಗೆ ಸಾರ್ವಜನಿಕರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ, ನಿರಂಜನಮೂರ್ತಿ, ಕಟ್ಟೆ ಬಸಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net