ಮಾನವೀಯ ಮೌಲ್ಯಗಳ ಬೆಳೆಸಿಕೊಳ್ಳಿ

kudlgi skdrdp
ಕೂಡ್ಲಿಗಿಯಲ್ಲಿ ಶನಿವಾರ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸುಜ್ಞಾನ ನಿಧಿ ಯೋಜನೆಯಡಿ ಶಿಷ್ಯ ವೇತನ ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಉದ್ಘಾಟಿಸಿದರು. ಬಿಇಒ ಪದ್ಮನಾಭ ಕರಣಂ, ಎಸ್‌ಕೆಡಿಆರ್‌ಡಿಪಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪನಾಯಕ, ಸದಸ್ಯರಾದ ಹಡಗಲಿ ವೀರಭದ್ರಪ್ಪ, ಗುಂಡಪ್ಪ, ಸಿದ್ದೇಶ್, ಎಲ್.ಪವಿತ್ರಾ ಇತರರಿದ್ದರು.
Published on

ಕೂಡ್ಲಿಗಿ: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಶಾಲೆ, ಪಾಲಕರಿಗೆ ಕೀರ್ತಿ ತರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿಜಯನಗರ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುಜ್ಞಾನ ನಿಧಿಯಡಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತರಾಗದೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು.

ಬಡವರ ಮಕ್ಕಳಿಗೆ ಅನುಕೂಲ ಕಲ್ಪಿಸಲು ಧರ್ಮಸ್ಥಳ ಸಂಸ್ಥೆ ಪ್ರತಿ ತಿಂಗಳು ಶಿಷ್ಯವೇತನ ನೀಡುವ ಮಹತ್ತರ ಕಾರ್ಯ ಮಾಡುತ್ತಿದೆ. ತಾಲೂಕಿನ 106 ಸೇರಿ ಜಿಲ್ಲೆಯ 582 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ರಾಜ್ಯದಲ್ಲಿ 96 ಸಾವಿರ ಮಕ್ಕಳು ಅನುಕೂಲ ಪಡೆದಿದ್ದಾರೆ ಎಂದರು.

ಬಿಇಒ ಪದ್ಮನಾಭ ಕರಣಂ, ಎಸ್‌ಕೆಡಿಆರ್‌ಡಿಪಿ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕಾವಲಿ ಶಿವಪ್ಪನಾಯಕ, ಸದಸ್ಯರಾದ ಹಡಗಲಿ ವೀರಭದ್ರಪ್ಪ, ಗುಂಡಪ್ಪ, ಸಿದ್ದೇಶ್, ಎಲ್.ಪವಿತ್ರಾ, ಧರ್ಮಸ್ಥಳ ಸಂಸ್ಥೆ ಯೋಜನಾಧಿಕಾರಿ ಸಂತೋಷ ಕುಮಾರ್, ಕಚೇರಿ ಮೇಲ್ವಿಚಾರಕರಾದ ರೇವಣ್ಣ, ಜ್ಯೋತಿ, ರೇಖಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net