

ಕೂಡ್ಲಿಗಿ: ಸಂವಿಧಾನಕ್ಕೆ ಗೌರವ ನೀಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ ಎಂದು ತಹಸೀಲ್ದಾರ್ ಟಿ. ಜಗದೀಶ ಹೇಳಿದರು. ತಾಲೂಕು ಆಡಳಿತ ಭನವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶದಲ್ಲಿ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ. ದೇಶದ ಯುವ ಪೀಳಿಗೆ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗೌರವ ಭಾವನೆ ಹೊಂದಬೇಕು. ಅದರಲ್ಲಿನ ಮೂಲಭೂತ ಹಕ್ಕುಗಳು, ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.
ನಂತರ ಸಂವಿಧಾನ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ತಾಲೂಕು ಕಚೇರಿ ಸಿಬ್ಬಂದಿ ಇಮ್ರಾನ್ ಹಾಗೂ ಈಶಪ್ಪ ಸಂವಿಧಾನ ಕುರಿತು ಮಾತನಾಡಿದರು. ಡಿಎಸ್‌ಎಸ್ ಮುಖಂಡ ಡಿ.ಎಚ್.ದುರುಗೇಶ್, ಕಂದಾಯ ಸಿಬ್ಬಂದಿ ನಾಗರಾಜ್, ವಾಸುದೇವ, ಚೌಡಪ್ಪ, ಸವಿತಾ ಇತರರು ಇದ್ದರು.