ನಮಗೂ ಪ್ರತ್ಯೇಕ ನಿವೇಶನ ನೀಡಿ; ನಮಗೂ ಪ್ರತ್ಯೇಕ ನಿವೇಶನ ನೀಡಿ

07032022 Kudligi Marsmukhumi protest
Published on

ಮದಕರಿ ವೃತ್ತದಲ್ಲಿ ಪ್ರತಿಭಟನೆ

ಕೂಡ್ಲಿಗಿ: ಪ್ರತ್ಯೇಕ ನಿವೇಶನ ಒಳಗೊಂಡಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲೂಕು ಮಂಗಳಮುಖಿಯರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿ, ಸೋಮವಾರ ಮದಕರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಸರ್ಕಾರ ಸರ್ವೇ ಮಾಡಿ ಗುರುತಿನ ಚೀಟಿ ನೀಡಬೇಕು. ಮೊದಲಿದ್ದ ಹೆಸರನ್ನು ತೆಗೆದು ಮಂಗಳಮುಖಿಯರಾದ ಮೇಲಿನ ಹೆಸರು ಸೇರಿಸಿ ಆಧಾರ್ ಕಾರ್ಡ್ ನೀಡಬೇಕು. ಸರ್ಕಾರಿ ಕಚೇರಿಯಲ್ಲಿ ಕೆಲಸ ನೀಡಬೇಕು. ಈಗಿರುವ 800 ರೂ. ಮಾಸಾಶನವನ್ನು 10 ಸಾವಿರ ರೂ.ಗೆ ಏರಿಸಬೇಕು. ಬ್ಯಾಂಕ್‌ಗಳಲ್ಲಿ 10 ಲಕ್ಷ ರೂ. ಸಹಾಯಧನ(ಲೋನ್)ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಟಿ.ಜಗದೀಶ್‌ಗೆ ಸಲ್ಲಿಸಿದರು. ಸಂಘದ ಸದಸ್ಯೆಯರಾದ ಲಕ್ಷ್ಮೀ, ಸುಧಾ, ಕೆ.ಶಿವಾನಿ, ಮುನಿಕಾ, ಸಿರಿ ಮತ್ತು ಇವರನ್ನು ಬೆಂಬಲಿಸಿದ ರಮೇಶ, ಕೆಂಚಪ್ಪ, ಪರಶುರಾಮ, ಕುಮಾರಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net