ಕುದ್ಕೋರಿಗುಡ್ಡೆ ದೇವರ ವಿಗ್ರಹಗಳು ಪತ್ತೆ

mng--18 march Vigraha
Published on

ಮಂಗಳೂರು : ನಗರದ ಪಂಪ್‌ವೆಲ್-ಕುದ್ಕೋರಿ ಗುಡ್ಡೆ ಮುಖ್ಯರಸ್ತೆಯ ಕುರುಚಲು ಗಿಡಗಳ ಪೊದೆಯ ನಡುವೆ ಪ್ಲಾಸ್ಟಿಕ್ ಚೀಲದಲ್ಲಿ ದೇವರ ವಿಗ್ರಹಗಳು ಪತ್ತೆಯಾಗಿವೆ.


ಬೆಳ್ಳಿಯಂತೆ ಕಾಣುವ ಶಾರದಾ ದೇವಿಯ ಸುಮಾರು 2.5 ಇಂಚು ಉದ್ದದ ಮತ್ತು 1 ಇಂಚು ಉದ್ದದ, ಗಣಪತಿಯ ಸುಮಾರು 1 ಇಂಚು ಉದ್ದದ, ಲಕ್ಷ್ಮೀ ದೇವಿಯ ಸುಮಾರು 2 ಇಂಚು ಉದ್ದದ, ಶಾರದಾ ದೇವಿಯ ಸುಮಾರು 1 ಇಂಚು ಉದ್ದದ, ಹಿತ್ತಾಳೆಯಂತೆ ಕಾಣುವ ನಂದಿಯ 1 ಇಂಚು ಉದ್ದದ, ಕಂಚಿನಂತೆ ಕಾಣುವ ದತ್ತಾತ್ರೇಯ ದೇವರ 6 ಇಂಚು ಉದ್ದ ಹಾಗೂ ಹಿತ್ತಾಳೆಯಂತೆ ಕಾಣುವ ನಾಗದೇವರ 2 ಇಂಚು ಉದ್ದದ ವಿಗ್ರಹಗಳಿದ್ದು ವಾರಸುದಾರರು ಇದ್ದರೆ ಸೂಕ್ತ ದಾಖಲೆಗಳೊಂದಿಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆ ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net