ಕುಡಿತಿನಿಯ ವಾಲ್ಮೀಕಿ ನಗರದಲ್ಲಿನ ಸಾರ್ವಜನಿಕ ಮಹಿಳಾ ಶೌಚಗೃಹವನ್ನು ಉದ್ಘಾಟಿಸುವಂತೆ ಮಹಿಳೆಯರ ಆಗ್ರಹ

Kurugodu Public Toilet
ಕುರುಗೋಡು ಸಮೀಪದ ಕುಡಿತಿನಿಯ ವಾಲ್ಮೀಕಿ ನಗರದಲ್ಲಿರುವ ಮಹಿಳಾ ಶೌಚಗೃಹವನ್ನು ಉದ್ಘಾಟಿಸುವಂತೆ ವಾರ್ಡ್‌ನ ಮಹಿಳೆಯರು ಗುರುವಾರ ಪ್ರತಿಭಟನೆ ನಡೆಸಿದರು.
Published on

ಕುರುಗೋಡು: ಸಮೀಪದ ಕುಡಿತಿನಿಯ ವಾಲ್ಮೀಕಿ ನಗರದಲ್ಲಿನ ಸಾರ್ವಜನಿಕ ಮಹಿಳಾ ಶೌಚಗೃಹವನ್ನು ಉದ್ಘಾಟಿಸಿ ಬಳಸಲು ಮುಕ್ತಗೊಳಿಸಬೇಕು ಎಂದು 7ಮತ್ತು 8ನೇ ವಾರ್ಡ್ ಮಹಿಳೆಯರು ಮಹಿಳಾ ಶೌಚಗೃಹ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ವಾಲ್ಮೀಕಿ ನಗರದ ಮಹಿಳೆ ಹುಲಿಗೆಮ್ಮ ಮಾತನಾಡಿ, ಮೂರು ವರ್ಷಗಳ ಹಿಂದೆ 12 ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಮಹಿಳಾ ಶೌಚಗೃಹವನ್ನು ನಿರ್ಮಾಣ ಮಾಡಿದ್ದಾರೆ. ಆದರೇ, ಈವರೆಗೂ ಉದ್ಘಾಟನೆ ಮಾಡಿಲ್ಲ. ಮಹಿಳೆಯರು ಬಯಲು ಬಹಿರ್ದೆಸೆ ಹೋಗಬೇಕೆಂದರೆ ಮುಜುಗರ ಉಂಟಾಗುತ್ತಿದೆ. ಮಹಿಳೆಯರ ಅನುಕೂಲಕ್ಕಾಗಿ ಶೌಚಗೃಹ ನಿರ್ಮಿಸಿ ಕೊಟ್ಟಿದೆ. ಸಂಬಂಧಿಸಿದ ಅಧಿಕಾರಿಗಳು ಬಳಸಲು ಅವಕಾಶ ನೀಡದೆ ಶೌಚಗೃಹಕ್ಕೆ ಬೀಗ ಹಾಕಿರುವುದು ಸಲ್ಲ. ಕೂಡಲೇ ಈ ಬಗ್ಗೆ ಗಮನಹರಿಸಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜತೆಗೆ ಮಹಿಳಾ ಶೌಚಗೃಹವನ್ನು ಯಾವಾಗ ಉದ್ಘಾಟಿಸುತ್ತಿರಿ ಎಂಬುದು ಸ್ಪಷ್ಟ ಪಡಿಸಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಅಧಿಕಾರಿಗಳಿಗೆ ಪ್ರಶ್ನಿಸಿದರು. ಈ ವೇಳೆ ನಿವಾಸಿಗಳಾದ ಮಂಗಳ, ಶಂಕ್ರಮ್ಮ, ಪ್ರೇಮ, ಸೇರಿದಂತೆ ವಾರ್ಡ್‌ನ ಮಹಿಳೆಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net