ಕೂಡಿಗೆ ವಸತಿ ಶಾಲೆಗೆ ಶೇ. 96 ಫಲಿತಾಂಶ

Karnataka SSLC Result 2025
Published on

9 ವಿದ್ಯಾರ್ಥಿಗಳ ಪಾರಮ್ಯ

ಕುಶಾಲನಗರ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಕುಶಾಲನಗರ ಸಮೀಪದ ಕೂಡಿಗೆಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಶೇ. 96 ಫಲಿತಾಂಶ ಪಡೆದು ಸಾಧನೆ ಮಾಡಿದೆ. 48 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಡಿಸ್ಟಿಂಕ್ಷನ್‌ನಲ್ಲಿ 24 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 19 ವಿದ್ಯಾರ್ಥಿಗಳು ಹಾಗೂ ದ್ವಿತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಪಾರಮ್ಯ ಮೆರೆದಿದ್ದಾರೆ. ಹಿಂದಿಯಲ್ಲಿ 8 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಷಯದಲ್ಲಿ ಒಬ್ಬ ವಿದ್ಯಾರ್ಥಿ ನೂರಕ್ಕೆ ನೂರು ಅಂಕ ಗಳಿಸಿರುವುದು ಹೆಮ್ಮೆ ತರಿಸಿದೆ. ಪಿ. ಪ್ರೀತಮ್ 618, ಆರ್.ಕೆ. ನವ್ಯಶ್ರೀ 612, ಬಿ.ಎಸ್. ಆದಿತ್ಯ 609, ಕೆ.ಜಿ. ಶಿಂಜನ್ 607 ಹಾಗೂ ಎಚ್.ಎಸ್. ಜೀವನ್ 605 ಅಂಕ ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಪ್ರಾಂಶುಪಾಲ ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net