ಬಂಧಿಖಾನೆ ವಾಸಿಗಳಿಗೆ ಮಾಹಿತಿ ಕಾರ್ಯಾಗಾರ

kudige
Published on

ಕುಶಾಲನಗರ:

ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ- ಉದ್ಯೋಗ ತರಬೇತಿ ಸಂಸ್ಥೆ, ಮಡಿಕೇರಿಯ ಜಿಲ್ಲಾ ಕಾರಾಗೃಹದ ಆಶ್ರಯದಲ್ಲಿ ಆಸಕ್ತಿ ಇರುವ ಬಂಧಿಖಾನೆ ನಿವಾಸಿಗಳಿಗೆ 6 ದಿನಗಳವರೆಗೆ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು. ಇದರಲ್ಲಿ ಸ್ವ- ಉದ್ಯೋಗ ಪಡೆಯಲು ಉದ್ಯಮಶೀಲತೆಯ ಯೋಗ್ಯತೆಯ ನ್ಯೂನತೆಗಳನ್ನು ತಿಳಿಸುವುದು, ಸಮಯ ನಿರ್ವಹಣೆ, ಬಂಡವಾಳದ ವಿವರ, ಸಂವಹನದ ಬಗ್ಗೆ, ಬ್ಯಾಂಕಿನಿAದ ಸಿಗುವ ಸೌಲಭ್ಯದ ಬಗ್ಗೆ, ಇದರ ಜತೆಯಲ್ಲಿ ಫಿನಾಯಿಲ್, ಸೋಪಾಯಿಲ್, ಸೋಪ್ ಪೌಡರ್, ಹಾರ್ಪಿಕ್, ಪೇಪರ್ ಬ್ಯಾಗ್, ಫೈಲ್ ಮೇಕಿಂಗ್ ಸೇರಿದಂತೆ ಹಲವಾರು ವಿಷಯ ಕುರಿತು ಸಂಪನ್ಮೂಲಗಳ ವ್ಯಕ್ತಿಗಳು ಮಾಹಿತಿ ನೀಡಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಜಿಲ್ಲಾ ಕಾರಾಗೃಹ ಅಧೀಕ್ಷಕ ಸಂಜಯ್ ಜತ್ತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ. ಗಂಗಾಧರ್ ನಾಯಕ್, ಜಿಲ್ಲಾ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಎ.ಜಿ. ಎಂ. ವಿ. ರಮೇಶ್ ಬಾಬು, ಕೂಡಿಗೆ ಯುನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಕೆ. ಪ್ರಕಾಶ್ ಕುಮಾರ್, ಜೈಲರ್ ಸಂಜಯಕುಮಾರ್ ತುಂಬದ, ಹೆಚ್.ಟಿ. ಲತಾ, ಹಾಗೂ ಸಂಪನ್ಮೂಲಗಳ ವ್ಯಕ್ತಿ ಲೀಲಾವತಿ, ಮಹಂತೇಶ್, ಸಲಾವುದ್ಧಿನ್ ಇದ್ದರು. ಕಾರ್ಯಗಾರದಲ್ಲಿ 29 ಬಂಧಿಖಾನೆವಾಸಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net