

ಚಿಕ್ಕಮಗಳೂರು: ನಗರದ ಬೋಳರಾಮೇಶ್ವರ ದೇವಾಲಯ ಆವರಣದಲ್ಲಿ ವಿದ್ಯಾ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಅಂಗವಾಗಿ ಸೋಮವಾರ ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ಗಣಪತಿ ಸಮಿತಿ ಪದಾಧಿಕಾರಿಗಳು ಭೂಮಿ ಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ, ಸತತ ಇಪ್ಪತ್ತೊಂದು ದಿನಗಳ ಕಾಲ ಗಣಪತಿ ಸೇವಾ ಸಮಿತಿಯಿಂದ ಅತ್ಯಂತ ವಿಜೃಂಭಣೆಯಿAದ ಭವ್ಯಮಂಟಪದಲ್ಲಿ ವಿದ್ಯಾಗಣಪತಿಯನ್ನು ಪ್ರತಿ ಷ್ಟಾಪಿಸಲಾಗುತ್ತದೆ. ಈ ನಡುವೆ ಭರತನಾಟ್ಯ, ಹರಿಕಥೆ, ಆರ್ಕೇಸ್ಟಾç ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾಗಣಪತಿ ಸನ್ನಿಧಿಯಲ್ಲಿ ಪ್ರಾರ್ಥಿಸುವುದೇನೆಂದರೆ ಸಮಾಜದಲ್ಲಿರುವ ವಿಘ್ನಗಳನ್ನು ದೂರವಿರಿಸಬೇಕು. ಮುಖ್ಯವಾಗಿ ರೈತಾಪಿ ವರ್ಗಕ್ಕೆ ಉತ್ತಮ ಮಳೆಯಾಗಿ ಇಳುವರಿ ಹೆಚ್ಚಿನ ಮಟ್ಟದಲ್ಲಿ ಪಡೆದುಕೊಂಡು ನಿಗಧಿತ ಬೆಲೆ ದೊರಕುವಂತಾಗಲಿ ಹಾಗೂ ನಗರ ಪ್ರದೇಶದ ಜನತೆಗೆ ಉತ್ತಮ ಆರೋಗ್ಯ ಲಭಿಸುವಂತಾಗಲಿ ಎಂದು ಪ್ರಾರ್ಥಿಸಿz್ದೆÃವೆ ಎಂದರು.
ಪ್ರತಿ ವರ್ಷ ವಿದ್ಯಾಗಣಪತಿ ಕೊನೆಯ ದಿನದಂದು ನಗರದ ಪ್ರಮುಖ ಬೀದಿಗಳಲ್ಲಿ ಹಲವಾರು ಸಾಂಸ್ಕೃತಿಕ, ಕಲಾತಂಡಗಳೊAದಿಗೆ ಮೆರವಣಿಗೆ ನಡೆಸಿ ಬಸವನಹಳ್ಳಿಕೆರೆಗೆ ವಿಸರ್ಜಿಸಲಾಗುತ್ತಿತ್ತು. ಆದರೆ ನಾಲ್ಕೆÊದು ವರ್ಷಗಳಿಂದ ಕೆರೆ ಅಭಿವೃಧ್ದಿ, ಬರಗಾಲದಿಂದ ಸಾಧ್ಯವಾಗಿರಲಿಲ್ಲ. ಇದೀಗ ಉತ್ತಮ ಮಳೆಯಾಗಿ ಬಸವನಹಳ್ಳಿ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಗಣಪತಿಯನ್ನು ಅಲ್ಲಿಯೇ ವಿಸರ್ಜಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಜಿಲ್ಲೆಯ ಶ್ರೇಯೋಭಿವೃದ್ಧಿ ದೃಷ್ಟಿಯಿಂದ ಇಂದು ಗಣಪತಿ ಪ್ರತಿಷ್ಟಾಪನೆಗೆ ಗುದ್ದಲಿ ಪೂಜೆ ನೆರವೇರಿದೆ. ಅದರಂತೆ ನಗರದ ಜನತೆ ಪರಿಸರಕ್ಕೆ ಪೂರಕವಾದ ಗಣಪತಿಗಳನ್ನು ಪ್ರತಿಷ್ಟಾಪಿಸಲು ಮುಂದಾಗಬೇಕು. ಸ್ಥಳೀಯರು ಗಣಪತಿ ವಿಸರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಕೆಲವೆಡೆ ತಾತ್ಕಾಲಿಕ ಬಾವಿಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ವಿಜೃಂಭಣೆಯಿAದ ವಿಘ್ನೇಶ್ವರನನ್ನು ಪ್ರತಿಷ್ಟಾಪಿಸಿ ಭಕ್ತಾಧಿಗಳಿಗೆ ಅನುಕೂಲವನ್ನು ಸಮಿತಿ ಕಲ್ಪಿಸುತ್ತಿದೆ. ಅದರಂತೆ ನಗರಸಭಾ ಆಡಳಿತವು ಸಂಪೂರ್ಣ ಕೈಜೋಡಿಸಲಿದೆ. ಬರುವಂತಹ ಭಕ್ತಾಧಿಗಳಿಗೆ ಮನರಂಜಿಸುವ ನಿಟ್ಟಿ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಶ್ರೀಗಣಪತಿ ಸೇವಾ ಸಮಿತಿ ಅಧ್ಯಕ್ಷ ಸಿ.ಎಸ್.ಕುಬೇರ, ಸದಸ್ಯರಾದ ಈಶ್ವರಪ್ಪ ಕೋಟೆ, ಸಿ.ಆರ್.ಕೇಶವಮೂರ್ತಿ, ಸಚಿನ್‌ಗೌಡ, ಮಂಜುನಾಥ್, ಉಮೇಶ್‌ಕುಮಾರ್, ಚೇತನ್, ಮೋಹನ್, ದಿವಾಕರ್, ಶ್ರೀನಿವಾಸ್ ಮತ್ತಿತರರಿದ್ದರು.