ಕುಡತಿನಿ ಪಪಂ ಪುರಸಭೆಯಾಗಿ ಮೇಲ್ದರ್ಜೆಗೆ

ಕುಡತಿನಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ್ ಮಾತನಾಡಿದರು. ಮುಖ್ಯಾಧಿಕಾರಿ ತೀರ್ಥಪ್ರಸಾದ್, ಸದಸ್ಯರಾದ ಟಿ.ಮಂಜುನಾಥ್, ಜಿ.ಎಸ್.ವೆಂಕಟರಮಣ ಬಾಬು, ರಾಮಲಿಂಗಪ್ಪ, ಬಿ.ಕೆ.ಲೆನಿನ್, ಕೆ.ಎಂ.ಹಾಲಪ್ಪ ಇದ್ದರು.

Published on

ಕುರುಗೋಡು: ಕುಡತಿನಿ ಪಟ್ಟಣ ಪಂಚಾಯಿತಿಯನ್ನು ಸಂಸದ, ಜಿಲ್ಲಾಧಿಕಾರಿ ಆದೇಶದಂತೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ವ ಸದಸ್ಯರಿಂದ ಅನುಮೋದನೆ ನೀಡಲಾಗಿದೆ ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಜಶೇಖರ್ ತಿಳಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಕುಡತಿನಿ ಪಟ್ಟಣ ಹಾಗೂ ವೇಣಿವೀರಾಪುರ ಗ್ರಾಮ ಒಳಗೊಂಡಂತೆ ಶೀಘ್ರವಾಗಿ ಪುರಸಭೆ ಕಾರ್ಯಾರಂಭಿಸಲು ಕಾನೂನಾತ್ಮಕವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಕುಡತಿನಿ ಕೈಗಾರಿಕಾ ಪ್ರದೇಶವಾಗಿದ್ದು, 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ. ಪಟ್ಟಣದಲ್ಲಿ ಮೂಲಸೌಕರ್ಯ ಕಲ್ಪಿಸಿ ಮಾದರಿಯಾಗಿಸಲು ಪುರಸಭೆ ಅವಶ್ಯಕ ಎಂದರು.

ಪ.ಪಂ. ಮುಖ್ಯಾಧಿಕಾರಿ ತೀರ್ಥಪ್ರಸಾದ್ ಮಾತನಾಡಿ, ಮೂರು ಜನ ಅಂಗವಿಕಲರಿಗೆ ವಾಹನ ಹಾಗೂ ಸಣ್ಣ ವ್ಯಾಪಾರಕ್ಕಾಗಿ ಪ್ರೋತ್ಸಾಹ ಧನ ವಿತರಿಸಲಾಗುವುದು. ಪರಿಶಿಷ್ಟ ಜಾತಿ, ವರ್ಗದ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸಲಾಗುವುದು ಎಂದು ತಿಳಿಸಿದರು. ಇಂಜಿನಿಯರ್ ಶಾರದಾ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net