ಶರಣರ ಆದರ್ಶ ಅನುಕರಣೀಯ

Kudarisalawadagi, Devahipparagi, Basavadi Pramathas, Kayaka Siddhanta,
ದೇವರಹಿಪ್ಪರಗಿ ಪಟ್ಟಣದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರ ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಪಾಲ್ಗೊಂಡಿದ್ದರು. ಕಲ್ಯಾಣಿ ಭಜಂತ್ರಿ, ಶಿವು ಭಜಂತ್ರಿ ಇತರರಿದ್ದರು.
Published on

ದೇವರಹಿಪ್ಪರಗಿ: ಬಸವಾದಿ ಪ್ರಮಥರು ಕಾಯಕ ಸಿದ್ದಾಂತಕ್ಕೆ 12ನೇ ಶತಮಾನದಲ್ಲೇ ಆದ್ಯತೆ ನೀಡುವ ಮೂಲಕ ದುಡಿಯುವ ವರ್ಗಕ್ಕೆ ಪ್ರಾಧಾನ್ಯತೆ ನೀಡಿದ್ದಾರೆ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ನುಲಿಯ ಚಂದಯ್ಯನವರ ಭಾವಚಿತ್ರ ಮೆರವಣಿಗೆ ವೇಳೆ ಅವರು ಗುರುವಾರ ಮಾತನಾಡಿದರು.

ನಾಡಿನ ಪ್ರತಿಯೊಬ್ಬರೂ ದುಡಿದು ಉಣ್ಣಬೇಕು. ಇಂತಹ ಚಿಂತನೆ, ಕಾಯಕ ಪರ ಆಲೋಚನೆಗಳ ಮೂಲಕ ಹೆಸರುವಾಸಿಯಾದವರಲ್ಲಿ ಕಾಯಕಯೋಗಿ ನುಲಿಯ ಚಂದಯ್ಯನವರು ಸಹ ಪ್ರಮುಖರಾಗಿದ್ದಾರೆ. ಶರಣರು ತಮ್ಮ ವೃತ್ತಿಯ ಜತೆಗೆ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತ ತಮ್ಮ ವಚನಗಳ ಮೂಲಕ ಸಮಾಜ ತಿದ್ದುವ ಕಾರ್ಯ ಮಾಡಿದರು. ಇಂತಹ ಮಹನೀಯರು ನಮಗೆಲ್ಲ ಆದರ್ಶಪ್ರಾಯರಾಗಿದ್ದಾರೆ ಎಂದರು.

ಸುಮಂಗಲೆಯರ ಕುಂಭಮೇಳದೊಂದಿಗೆ ನುಲಿಯ ಚಂದಯ್ಯನವರ ಭಾವಚಿತ್ರ ಮೆರವಣಿಗೆ ನಡೆಯಿತು. ಭಜಂತ್ರಿ ಸಮಾಜದ ಪ್ರಮುಖರಾದ ಶ್ರೀಕಾಂತ ಭಜಂತ್ರಿ, ಹಣಮಂತ ಭಜಂತ್ರಿ, ಬಾಬು ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಚಿದಾನಂದ ಭಜಂತ್ರಿ, ಕಲ್ಲಪ್ಪ ಭಜಂತ್ರಿ, ಕಾಶೀನಾಥ ಭಜಂತ್ರಿ, ಕಲ್ಯಾಣಿ ಭಜಂತ್ರಿ, ಶಿವು ಭಜಂತ್ರಿ, ಮಲ್ಲು ಭಜಂತ್ರಿ, ಸದಾಶಿವ ಭಜಂತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net