

ಹೂವಿನಹಿಪ್ಪರಗಿ: ಸಮೀಪದ ಕುದರಿಸಾಲವಾಡಗಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷರಾಗಿ ಸೋಮನಗೌಡ (ಸಚಿನಗೌಡ) ಪಾಟೀಲ, ಉಪಾಧ್ಯಕ್ಷರಾಗಿ ಶರಣಪ್ಪ ಸಾತಿಹಾಳ ಅವರು ಗುರುವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ಅಧ್ಯಕ್ಷ ಸಚಿನಗೌಡ ಪಾಟೀಲ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ಬ್ಯಾಂಕ್ ಹೆಚ್ಚಿನ ಆದಾಯದೊಂದಿಗೆ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಿದೆ. ಬ್ಯಾಂಕ್ ಹಾಗೂ ರೈತರ ಏಳಿಗೆಗೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲು ಆಡಳಿತ ಮಂಡಳಿಯೊಂದಿಗೆ ಚರ್ಚಿಸಲಾವುದು ಎಂದರು.
ಚುನಾವಣಾಧಿಕಾರಿ ಎಸ್.ಎಂ.ಹಂಗರಗಿ, ಬ್ಯಾಂಕ್ ನಿರ್ದೇಶಕರಾದ ಅನೀಲಗೌಡ ಪಾಟೀಲ, ಸಿದ್ರಾಮಪ್ಪ ಕನ್ನೂರ, ಶರಣಪ್ಪ ಉಪ್ಪಾರ, ಇಮಾಮಬಿ ಹುಣಶ್ಯಾಳ, ಲಕ್ಷ್ಮೀಬಾಯಿ ಸಜ್ಜನ, ಬಂದೇನವಾಜ ಕತನಹಳ್ಳಿ, ಪ್ರಶಾಂತ ಬಿರಾದಾರ, ಮಂಜುನಾಥ ಗುಡಗುಂಟಿ, ಶಂಕ್ರಪ್ಪ ಮಾದರ, ಶ್ರೀಕಾಂತ ಕಂಬಾರ, ಮುಖಂಡರಾದ ಗುರುನಗೌಡ ಪಾಟೀಲ, ಸಂಗನಗೌಡ ಪಾಟೀಲ, ಎಂ.ವಿ.ಅಣ್ಣೆಪ್ಪನವರ ಇತರರಿದ್ದರು.
ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ ಅನೀಲ ದೇಸಾಯಿ ಕಾರ್ಯಕ್ರಮ ನಿರ್ವಹಿಸಿದರು.