ರಸ್ತೆ ಗುಂಡಿ ಮುಚ್ಚಿದ ಕುದರೆಮುಖ ಪೊಲೀಸರು

16kls2
ಕಳಸ ತಾಲೂಕಿನ ಕುದುರೆಮುಖ ಪೊಲೀಸರು ನೆಲ್ಲಿಬೀಡು-ಹೊಸಮಕ್ಕಿ ರಸ್ತೆ ಗುಂಡಿ ಮುಚ್ಚುತ್ತಿರುವುದು.
Published on

ಕಳಸ: ಸ್ವಾತಂತ್ರೃ ದಿನಾಚರಣೆ ಸಂದರ್ಭದಲ್ಲಿ ಹೆಚ್ಚಿನ ಪೊಲೀಸರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೆ, ಕುದುರೆಮುಖ ಪೊಲೀಸರು ಮಾತ್ರ ರಸ್ತೆಯ ಗುಂಡಿ ಮುಚ್ಚುವ ಕಾಯಕದಲ್ಲಿ ತೊಡಗಿದ್ದರು.
ಕಳಸ-ಕಾರ್ಕಳ ಮುಖ್ಯ ರಸ್ತೆಯ ನೆಲ್ಲಿಬೀಡು-ಹೊಸಮಕ್ಕಿವರೆಗಿನ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಗುಂಡಿಯಲ್ಲಿ ರಸ್ತೆ ಹುಡುಕುವಂತಾಗಿತ್ತು. ಈ ರಸ್ತೆಯಲ್ಲಿ ಸಂಚರಿಸಿದವರು ಆಡಳಿತ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದರು.ಈ ರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಾರಂಭ ಮಾಡಿದ ಗುತ್ತಿಗೆದಾರ ಸ್ವಲ್ಪ ಕೆಲಸಮಾಡಿ ಮತ್ತೆ ಈ ಕಡೆ ತಲೆ ಹಾಕಿರಲಿಲ್ಲ.
ಈ ರಸ್ತೆಯ ಪರಿಸ್ಥಿತಿ ಗಮನಿಸಿದ ಕುದುರೆಮುಖ ಪೊಲೀಸರು ಸ್ವಾತಂತ್ರೃದಿನದಂದು ತಮ್ಮ ಎಲ್ಲ ಕೆಲಸಗಳನ್ನು ಬದಿಗೊತ್ತಿ ಹಾರೆ, ಪಿಕಾಸಿ, ಬುಟ್ಟಿ ಹಿಡಿದು ರಸ್ತೆ ಕೆಲಸಕ್ಕೆ ಇಳಿದಿದ್ದರು. 4 ಕಿ.ಮೀ ಉದ್ದ ರಸ್ತೆಯಲ್ಲಿದ್ದ ದೊಡ್ಡ ದೊಡ್ಡ ಗುಂಡಿಗಳಿಗೆ ಜಲ್ಲಿ, ಕಲ್ಲು, ಮಣ್ಣು ಹಾಕಿ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕ ಪರಿಹಾರ ನೀಡಿದ್ದಾರೆ. ಇವರ ಕೆಲಸ ನೋಡಿ ಪ್ರವಾಸಿಗರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪಿಎಸ್‌ಐ ಶಿವರುದ್ರಮ್ಮ, ಪೊಲೀಸರಾದ ಮಂಜುನಾಥ್ ನಾಯಕ್, ಸಚಿನ್, ಅನಿಲ್, ಸಂತೋಷ್, ಗ್ರಾಮಸ್ಥರಾದ ಸುಧಾಕರ್,ಸಿದ್ದಪ್ಪ, ಸುರೇಶ್, ಕೃಷ್ಣಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net