ದಾನಗಳಲ್ಲಿ ಶ್ರೇಷ್ಠ ರಕ್ತದಾನ

VMS 23-3
Published on

ವಿಜಯಪುರ: ರಕ್ತ ಕೊಡುವುದರಿಂದ ನಮ್ಮ ಆರೋಗ್ಯ ಸುಧಾರಣೆ ಆಗುವುದರ ಜೊತೆಗೆ ರಕ್ತದ ಕೊರತೆ ಇರುವವರಿಗೆ, ಅಪಘಾತಕ್ಕೊಳಗಾದವರಿಗೆ ಹಾಗೂ ರೋಗಿಗಳಿಗೆ ಜೀವದಾನ ಮಾಡಿದಂತಾಗುತ್ತದೆ ಎಂದು ರಾಷ್ಟ್ರೀಯ ಬಸವ ಸೈನದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಬಸವನಬಾಗೇವಾಡಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮಿಗಳ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿ ಅವರು ಮಾತನಾಡಿದರು. ಪ್ರಾಚಾರ್ಯ ಸುರೇಶಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ, ಡಾ. ಮಹಾಂತೇಶ ಜಾಲಗೇರಿ ಮಾತನಾಡಿದರು. ಶ್ರೀಕಾಂತ ಕೊಟ್ರಶೆಟ್ಟಿ, ಮನ್ನನ್ನ ಶಾಬಾದಿ, ರಾಷ್ಟ್ರೀಯ ಬಸವ ಸೈನ್ಯದ ತಾಲೂಕಾಧ್ಯಕ್ಷ ಸಂಜು ಬಿರಾದಾರ, ಬಸವರಾಜ ನಾಯ್ಕೋಡಿ, ಅರವಿಂದ ಗೊಳಸಂಗಿ, ಸಂತೋಷ ನಿಡಗುಂದಿ, ರಮೇಶ ಜಾಲವಾದಿ, ಪ್ರಶಾಂತ ಮುಂಜಾನೆ, ವೀರೇಶ ಗಬ್ಬೂರ, ಸಿದ್ದರಾಮ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net