

ಕೂಡಲಸಂಗಮ: ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಬಿಸಲದಿನ್ನಿ ಗ್ರಾಮದ ಯುವಕರು ಗ್ರಾಮದ ಎರಡು ಮುಖ್ಯ ರಸ್ತೆಗಳಿಗೆ ಮುಳ್ಳು ಕಂಟಿ ಬೇಲಿಯನ್ನು ಹಾಕಿದ್ದಾರೆ. ಈ ಮೂಲಕ ಗ್ರಾಮಕ್ಕೆ ಯಾರೂ ಬರದಂತೆ ಹಾಗೂ ಗ್ರಾಮದವರು ಎಲ್ಲಿಗೂ ಹೊಗದಂತೆ ಭಾನುವಾರ ತಡೆಯುವ ಕಾರ್ಯಮಾಡಿದ್ದಾರೆ. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಶಿ ಯರಝರಿ, ಯುವ ಮುಖಂಡರಾದ ಮಲ್ಲಪ್ಪ ಹಡಪದ, ಮಂಜುನಾಥ ಮಾದರ, ಶಾಂತೇಶ ಬರಬರಿ, ಮುರ್ತುಜ ಮಕಾನದಾರ ಇತರರು ಇದ್ದರು.