ಮನೆಯಲ್ಲೇ ಬಸವ ಜಯಂತಿ ಆಚರಿಸಿ

Basavajaya Swamiji
Published on

ಕೂಡಲಸಂಗಮ: ಕರೊನಾ ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಮೇ 14 ರಂದು ಬಸವ ಜಯಂತಿಯನ್ನು ಭಕ್ತರು ಮನೆಯಲ್ಲೇ ಆಚರಿಸಬೇಕೆೆಂದು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಪ್ರತಿಯೊಬ್ಬ ಬಸವ ಭಕ್ತರು ತಮ್ಮ ಮನೆಯಲ್ಲಿಯೇ ಬಸವಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಚನ ಪಠಣ ಮಾಡಬೇಕು. ಲಾಕ್‌ಡೌನ್ ಇರುವುದರಿಂದ ಆಹಾರ ಹಾಗೂ ಅಗತ್ಯ ವಸ್ತುಗಳ ಅವಶ್ಯಕತೆ ಇರುವ ಕನಿಷ್ಠ ಒಂದು ಕುಟುಂಬಕ್ಕಾದರೂ ಆಹಾರ ಕಿಟ್‌ಗಳನ್ನು ನೀಡಿ ಇಲ್ಲವೇ ಪ್ರಸಾದ ವ್ಯವಸ್ಥೆ ಮಾಡುವ ಮೂಲಕ ಪ್ರಸಕ್ತ ವರ್ಷದ ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Community-verified icon
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net