ಕನಸು ಸಾಕಾರಕ್ಕೆ ಸತತ ಪ್ರಯತ್ನ ಅಗತ್ಯ,  ವಿದ್ಯಾರ್ಥಿಗಳಿಗೆ ಡಾ. ಎ.ಎಂ. ಖಾನ್ ಸಲಹೆ,  ಸನಾ ಕಾಲೇಜಿನಲ್ಲಿ ಕವಿವಿ ಕುಲಪತಿಗೆ ಸನ್ಮಾನ

IMG_20251106_204347_851.jpg
Published on

ಹುಬ್ಬಳ್ಳಿ: ವ್ಯಕ್ತಿಯ ನಿಜವಾದ ಯಶಸ್ಸು ಚಿತ್ತ ಶುದ್ಧಿ, ಶಿಸ್ತು, ಮೌಲ್ಯಗಳು ಮತ್ತು ಮಾನವೀಯತೆಗಳ ಮೇಲೆ ನಿಂತಿದೆ. ವಿದ್ಯಾರ್ಥಿಗಳು ದೊಡ್ಡ ಕನಸು ಕಾಣಬೇಕು, ಅದರ ಸಾಕಾರಕ್ಕೆ ಸತತ ಪ್ರಯತ್ನ ಮಾಡಬೇಕು ಎಂದು ಕವಿವಿ ಕುಲಪತಿ ಡಾ. ಎ.ಎಂ. ಖಾನ್ ಹೇಳಿದರು.

ಇಲ್ಲಿಯ ಸನಾ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ಸನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ತಮ್ಮ ಪ್ರೇರಣಾದಾಯಕ ಭಾಷಣದ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಅವರು, ಜ್ಞಾನವನ್ನು ಪ್ರಾಮಾಣಿಕವಾಗಿ ಹಿಂಬಾಲಿಸಬೇಕು. ಗುರುಗಳು, ಪಾಲಕರಿಗೆ ಗೌರವ ನೀಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಪದವಿಯು ಉದ್ಯೋಗಕ್ಕೆ ಅರ್ಹತೆ ನೀಡುತ್ತದೆ. ಆದರೆ, ಮೌಲ್ಯಗಳು ನಿಮ್ಮನ್ನು ಮರೆಯಲಾಗದ ವ್ಯಕ್ತಿಯನ್ನಾಗಿಸುತ್ತವೆ. ಕರ್ನಾಟಕ ವಿಶ್ವವಿದ್ಯಾಲಯವು ಕೇವಲ ಶೈಕ್ಷಣಿಕ ಉಸ್ತುವಾರಿಯಾಗಿರದೇ ವಿದ್ಯಾರ್ಥಿಗಳ ನೈತಿಕ ಮತ್ತು ಭಾವನಾತ್ಮಕ ಬೆಳವಣಿಗೆಯಲ್ಲೂ ಸಂಪೂರ್ಣ ತೊಡಗಿಸಿಕೊಂಡಿದೆ ಎಂದರು.

ಶೈಕ್ಷಣಿಕ ಮಾನದಂಡ ಬಲಪಡಿಸುವುದು, ಸಂಶೋಧನೆ ಮತ್ತು ನವೋದ್ಯಮವನ್ನು ಉತ್ತೇಜಿಸುವುದು, ಪ್ರೇರಣಾದಾಯಕ ಕ್ಯಾಂಪಸ್ ವಾತಾವರಣ ನಿರ್ಮಿಸುವುದು ತಮ್ಮ ದೂರದೃಷ್ಟಿಯಾಗಿದೆ ಎಂದು ವಿವರಿಸಿದರು.

ಸನಾ ಸಂಸ್ಥೆಯ ಚೇರ್ಮನ್ ಮೊಹಮ್ಮದ್ ಹುಸೈನ್ ಮಳಗಿ, ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ್ ಅಲಿ, ಬಶೀರ್ ಅಹಮದ್ ಮತ್ತು ಟ್ರಸ್ಟಿಗಳಾದ ಮೊಹಮ್ಮದ್ ಅಯೂಬ್ ಸವಣೂರ, ತಾರಿಕ್ ಮುಜಾಹಿದ್, ಸರ್ಫರಾಜ್ ಅತ್ತಾರ್ ಇತರರು ಇದ್ದರು.

ಪ್ರೇರಣಾದಾಯಕ ಭಾಷಣಕಾರ ಪುಣೆಯ ಸಯೀದ್ ಅಹಮದ್ ಮತ್ತು ಎ.ಜೆ. ಅಕಾಡೆಮಿ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅತಿಥಿಗಳಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net