

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಕರ್ನಾಟಕ ವಿಶ್ವವಿದ್ಯಾಲಯಲ್ಲಿ ಕಳೆದ 9 ತಿಂಗಳಿ0ದ ಪ್ರಭಾರ ಕುಲಪತಿ ಆಡಳಿತವಿತ್ತು. 2 ದಿನಗಳ ಹಿಂದಷ್ಟೇ ಸರ್ಕಾರ ಡಾ. ಎ.ಎಂ. ಖಾನ್ ಅವರನ್ನು ಕಾಯಂ ಕುಲಪತಿಯಾಗಿ ನೇಮಕ ಮಾಡಿದೆ. ಸರ್ಕಾರದ ಆದೇಶದಂತೆ ಅವರು ಸೋಮವಾರ ಅಽಕಾರ ವಹಿಸಿಕೊಂಡಿದ್ದಾರೆ. ಅವರ ನೇಮಕ ಪ್ರಶ್ನಿಸಿ ರಾಜ್ಯಪಾಲರು ಮತ್ತು ಸರ್ಕಾರದ ವಿರುದ್ಧ ಡಾ. ಮಹದೇವಪ್ಪ ಕರಿದುರಗನವರ ಹೈಕೋರ್ಟ್ ಮೆಟ್ಟಿಲೇರಿದ್ದರು. ಸೋಮವಾರ ಅರ್ಜಿಯ ವಿಚಾರಣೆ ನಡೆದು ನೇಮಕಾತಿಗೆ ಸಂಬ0ಧಿಸಿ ಯಾವುದೇ ನಿರ್ಧಾರ ಕಾರ್ಯಗತಗೊಳಿಸದಂತೆ ಮಧ್ಯಂತರ ಆದೇಶ ನೀಡಿದೆ. ಅರ್ಹತೆ, ನ್ಯಾಯ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ವಿಶ್ವವಿದ್ಯಾಲಯದ ಕುಲಪತಿ ನೇಮಕವಾಗಬೇಕು ಎಂಬುದು ಡಾ. ಕರಿದುರಗನವರ ವಾದ. ಆದರೆ, ರಾಜ್ಯಪಾಲರು ಮತ್ತು ಸರ್ಕಾರ ಈ ಮೂರೂ ಮಾನದಂಡಗಳನ್ನು ಪರಿಗಣಿಸಿಲ್ಲ ಎಂದು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಜ್ಯಪಾಲರು, ರಾಜ್ಯ ಸರ್ಕಾರ, ಕುಲಸಚಿವ ಹಾಗೂ ಡಾ. ಎ.ಎಂ. ಖಾನ್ ಅವರ ವಿರುದ್ಧ ಧಾರವಾಡ ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದರು. ನ್ಯಾಯಮೂರ್ತಿ ಪ್ರದೀಪಸಿಂಗ್ ಯೆರೂರ ಅವರಿದ್ದ ಪೀಠದ ಎದುರು ಸೋಮವಾರ ವಿಚಾರಣೆಗೆ ಬಂದಿತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯಪಾಲರ ಪ್ರತಿನಿಧಿ, ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಕರ್ನಾಟಕ ವಿವಿ ಪ್ರತಿನಿಧಿ ಕುಲಸಚಿವ ಹಾಗೂ ಕುಲಪತಿ ಡಾ. ಖಾನ್ ಅವರಿಗೆ ನೋಟಿಸ್ ಜಾರಿಗೊಳಿಸಿತು. ಕುಲಪತಿ ನೇಮಕಕ್ಕೆ ಸಂಬ0ಧಿಸಿ ಯಾವುದೇ ನಿರ್ಧಾರ ಕೈಗೊಳ್ಳಬಾರದು. ಜು. 23ರಂದು ಮುಂದಿನ ವಿಚಾರಣೆಗೆ ಹಾಜರಾಗಬೇಕು ಎಂದು ಮಧ್ಯಂತರ ಆದೇಶ ನೀಡಿದೆ.