ಕರ್ನಾಟಕ ವಿಶ್ವವಿದ್ಯಾಲಯದ ಅರಿವೇ ಗುರು ಪ್ರಶಸ್ತಿ ಪ್ರಕಟ

Untitled
Published on

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯವು ೬೮ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ನೀಡುವ 2023ನೇ ಸಾಲಿನ ರಾಜ್ಯ ಮಟ್ಟದ `ಅರಿವೇ ಗುರು' ಪ್ರಶಸ್ತಿ ಘೋಷಿಸಿದೆ. ಧಾರವಾಡದ ಪ್ರೊ. ವೀರಣ್ಣ ರಾಜೂರ (ಸಾಹಿತ್ಯ), ಹುಬ್ಬಳ್ಳಿಯ ಪ್ರೊ. ಅಜಿತ ಕೇಶವ ಕೆಂಬಾವಿ (ಖಗೋಳ ವಿಜ್ಞಾನ ಕ್ಷೇತ್ರ) ಹಾಗೂ ಬೆಳಗಾವಿಯ ಪ್ರೊ. ಆರ್.ಜಿ. ಅಕ್ಕಿಹಾಳ (ಸಮಾಜ ವಿಜ್ಞಾನ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕವಿವಿಯ ಶೋಧನಾ ಆಯ್ಕೆ ಸಮಿತಿಯುವ ನಾಡಿನ ಕಲಾ, ವಿಜ್ಞಾನ, ಸಮಾಜ ವಿಜ್ಞಾನ ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಮೂವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭ ನ. 29ರಂದು ಬೆಳಗ್ಗೆ 10.30 ಗಂಟೆಗೆ ಕವಿವಿ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆಯಲಿದೆ. ನವದೆಹಲಿ ಜೆ.ಎನ್.ಯು ವಿಶ್ರಾಂತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅತಿಥಿಯಾಗಿ ಪಾಲ್ಗೊಳ್ಳುವರು. ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net