ಸಂಘದ ಬಲವರ್ಧನೆಗೆ ಸಹಕಾರ

kuchur
ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಘದ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷ ಮಹೇಶ್ ಶೆಟ್ಟಿ, ಸಿಇಒ ಪ್ರಿತ್ವಿನ್ ಎಂ, ಡಾ. ಧನಂಜಯ, ಜಯರಾಮ ಶೆಟ್ಟಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹಾಲು ಉತ್ಪಾದನೆ ಕಡಿಮೆಯಾದ ಕಾರಣ ಪ್ರಸಕ್ತ ವರ್ಷ ಕಡಿಮೆ ಲಾಭಾಂಶ ಬಂದಿದೆ. ಎಲ್ಲ ಸದಸ್ಯರು ಕೈಜೋಡಿಸಿ ಸಂಘವನ್ನು ಬಲವರ್ಧನೆ ಮಾಡಬೇಕು. ಈ ವರ್ಷದ ಲಾಭಕ್ಕಿಂತ ಮುಂದಿನ ವರ್ಷ ದ್ವಿಗುಣ ಆಗಬೇಕು ಎಂದು ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮಹೇಶ್ ಶೆಟ್ಟಿ ಕಾನ್ಬೆಟ್ ಹೇಳಿದರು.

ಕುಚ್ಚೂರು ಹಾಲು ಉತ್ಪಾದಕರ ಸಹಕಾರಿ ಸಂಘ ವತಿಯಿಂದ ಬುಧವಾರ ಕಚೇರಿಯಲ್ಲಿ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿತ್ವಿನ್ ಎಂ.ರಾವ್ ಮಾತನಾಡಿ, ಹಾಲು ಹೆಚ್ಚಳಕ್ಕೆ ಕ್ರಮ ವಹಿಸಿ, ಬಂಜೆತನ ನಿವಾರಣ ಕ್ಯಾಂಪ್‌ಗಳನ್ನು ಆಯೋಜಿಸಲಾಗುವುದು ಎಂದರು.

ಕುಚ್ಚೂರು ಹಾಲು ಉತ್ಪಾದಕರ ಸಂಘವು 1.68 ಲಕ್ಷ ರೂ. ಲಾಭಾಂಶ ಪಡೆದಿದ್ದು, ಶೇ.24 ಡಿವಿಡೆಂಡ್ ಘೋಷಿಸಲಾಯಿತು. ಸದಸ್ಯರಾದ ದಯಾನಂದ ಭಟ್, ನಿತ್ಯಾನಂದ ಭಟ್, ಉದಯಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಗೀತಾ ಶೆಟ್ಟಿ, ಸರೋಜಾ ಸಲಹೆ ನೀಡಿದರು.
ಡಾ.ಧನಂಜಯ, ಉಪಾಧ್ಯಕ್ಷ ಜಯರಾಮ ಶೆಟ್ಟಿ, ನಿರ್ದೇಶಕರಾದ ಕಾಳು ಶೆಟ್ಟಿ, ಆನಂದ ಶೆಟ್ಟಿ, ರಾಜೀವ ಶೆಟ್ಟಿ, ವಿಶ್ವನಾಥ್ ನಾಯ್ಕ, ಪ್ರಸನ್ನ ಶೆಟ್ಟಿ, ರಾಮಣ್ಣ ಪೂಜಾರಿ, ಕೃಷ್ಣ ಪೂಜಾರಿ, ಗೀತಾ ನಾಯ್ಕ, ಲಕ್ಷ್ಮೀ ಪೂಜಾರ್ತಿ ಇದ್ದರು.

ಹಾಲು ಹೆಚ್ಚಳಕ್ಕೆ ಕೆಎಂಎಫ್ ವತಿಯಿಂದ ಅಗತ್ಯ ಕ್ರಮಗಳನ್ನು ವಹಿಸುತ್ತಿರುತ್ತೇವೆ. ದನಗಳನ್ನು ಸರಿಯಾಗಿ ನೋಡಿಕೊಂಡಾಗ ಬಂಜೆತನದ ಪ್ರಮಾಣ ಕಡಿಮೆ ಇರುತ್ತದೆ. ಹಾಲು ಹೆಚ್ಚಳಕ್ಕೆ ಸದಸ್ಯರು ಸಹಕಾರ ನೀಡಬೇಕು.-ಮಂಜುನಾಥ್, ವಿಸ್ತರಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net