

ವಿಜಯವಾಣಿ ಸುದ್ದಿ ಜಾಲ ಕಟಕೋಳ (ಬೆಳಗಾವಿ)
ಭಾರತೀಯ ಸಂಸ್ಕೃತಿ,ಪರಂಪರೆಯಲ್ಲಿ ಯೋಗಕ್ಕೆ ತನ್ನದೆ ಆದ ಮಹತ್ವದ ಸ್ಥಾನವಿದೆ.ಯೋಗ ,ಪ್ರಾಣಾಯಾಮ ಮಾಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ರಕ್ಷಣೆ ಜೊತೆಗೆ ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎಂದು ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ನಿರ್ದೇಶಕ ಎಮ್.ಎಮ್.ಆತಾರ ಹೇಳಿದರು
ಕಟಕೋಳ ಗ್ರಾಮದ ಎಂ.ವಾಯ್ ಆತಾರ ಎಸ್ ಎಸ್ ಢವಣ ಕೆಪಿಎಸ್ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಕರ್ನಾಟಕದ ನಂ 1 ದಿನಪತ್ರಿಕೆ ವಿಜಯವಾಣಿ ಸಹಯೋಗದೊಂದಿಗೆ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಪಿಎಸ್ ಉಪಾಧ್ಯಕ್ಷ ಅಜ್ಜಪಾ ಪಾಣಿ ಮಾತನಾಡಿ
ದೈಹಿಕ ಕ್ಷಮತೆ, ಮಾನಸಿಕ ಆರೋಗ್ಯ, ನೆಮ್ಮದಿಗೆ ಯೋಗ ಸಹಕಾರಿ. ಯೋಗದ ಮೂಲ ನಮ್ಮ ಹೆಮ್ಮೆಯ ಭಾರತ.
ಯೋಗ.ಸಂತಸದಾಯಕ ಆತ್ಮ, ಉಲ್ಲಾಸಗೊಂಡ ಮನಸ್ಸು, ಆರೋಗ್ಯಕರ ದೇಹ. ಯೋಗದಿಂದ ಈ ಮೂರನ್ನೂ ಸಾಧಿಸಬಹುದು.ಭಾರತದ ಪ್ರಾಚೀನ ಯೋಗಾಭ್ಯಾಸದ ಪ್ರಯೋಜನಗಳನ್ನು ಜಗತ್ತಿಗೆ ಸಾರೋಣ ಎಂದರು.
ಕೆಪಿಎಸ್ ಸದಸ್ಯ ಶಿವಾನಂದ ಕುರಬೇಟ ಮಹಾಂತೇಶ ದೊಡವಾಡ ಶಿಕ್ಷಕ ಎಸ್ ಎಮ್ ದಿವಟಗಿ ನಿರೂಪಸಿದರು. ಶಿಕ್ಷಕ ಶ್ರೀಶೈಲ ಕೂಬಿಹಾಳ ವಂದಿಸಿದರು