

ಮಂಗಳೂರು: ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ್ ಆರ್ಗನೈಸೇಶನ್ ದಕ್ಷಿಣ ಕನ್ನಡ ಇದರ ವಾರ್ಷಿಕ ಮಹಾಸಭೆ ಕಾವೂರಿನಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭ ದಿ.ಗಂಗಾಧರ ಅತ್ತಾವರ ಸ್ಮರಣಾರ್ಥ ಶ್ರೀ ಗಣೇಶ್ ಆಂಬುಲೆನ್ಸ್ ಸರ್ವೀಸ್ ಕೊಡುಗೆ ನೀಡಿದ ಐಸಿಯು ಆಂಬುಲೆನ್ಸ್ ಲೋಕಾರ್ಪಣೆ ಮಾಡಲಾಯಿತು. ಸಮಾಜ ಸೇವಕಿ ರಜನಿ ಶೆಟ್ಟಿ ಬಲ್ಲಾಳಬಾಗ್ ಆಂಬುಲೆನ್ಸ್ ಲೋಕಾರ್ಪಣೆ ಮಾಡಿದರು.
ಕೆಟಿಡಿಒ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶರತ್ ಕಿರಣ್ ಅಧ್ಯಕ್ಷತೆ ವಹಿಸಿದ್ದರು. ಕೆಟಿಡಿಒ ರಾಜ್ಯ ಸಮಿತಿ ಸದಸ್ಯ ರಮೇಶ್ ಕುಂದಾಪುರ, ಕಾನೂನು ಸಲಹೆಗಾರ ಬಿ.ವಿವೇಕ್, ಗೌರವಾಧ್ಯಕ್ಷ ಶಶಿಧರ ಪ್ರಭು, ಉಪಾಧ್ಯಕ್ಷ ರೋಶನ್ ಸಾಲಿಯಾನ್, ರಾಜ್ಯ ಸಮಿತಿಯ ಜಿಲ್ಲಾ ಪ್ರತಿನಿಧಿ ಸಂದೇಶ್ ಬಂಟ್ವಾಳ್, ಕೋಶಾಧಿಕಾರಿ ಚರಣ್ ಶೆಟ್ಟಿ ಮೊದಲಾದವರು ಹಾಜರಿದ್ದರು.
ಶಶಿಧರ್ ಶೆಟ್ಟಿ ಸ್ವಾಗತಿಸಿದರು. ಬಳಿಕ ಮಹಾಸಭೆ ನಡೆಯಿತು.