ಕೆ.ಟಿ.ಹನುಮಂತು ಅಲಯನ್ಸ್ ಕ್ಲಬ್ ಜಿಲ್ಲಾ ಗರ್ವನರ್: ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಆಯ್ಕೆ ಪತ್ರ ವಿತರಣೆ

KT Hanumantu Alliance Club District Governor Mandya
Published on

ಮಂಡ್ಯ: ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್ ಜಿಲ್ಲೆ 268ರ(ಮಂಡ್ಯ ಹಾಗೂ ರಾಮನಗರ ರೆವಿನ್ಯೂ ಜಿಲ್ಲೆ) ಗರ್ವನರ್ ಆಗಿ ಕೆ.ಟಿ.ಹನುಮಂತು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ದೆಹಲಿ ಆಗ್ರಾದ ಜೆಪಿ ಪ್ಯಾಲೇಸ್ ಹೋಟೆಲ್ನಲ್ಲಿ ಮಾ.15 ರಿಂದ 18ರವರೆಗೆ ನಡೆದ ಅಲಯನ್ಸ್ 16ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಕೆ.ಟಿ.ಹನುಮಂತು ಅವರನ್ನು ಜಿಲ್ಲೆ 268ರ ಗರ್ವನರ್ ಆಗಿ ಆಯ್ಕೆ ಮಾಡಲಾಯಿತು. ಈ ವೇಳೆ ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್‌ನ ಅಧ್ಯಕ್ಷ ಸಿ.ಬಾಲಚಂದ್ರನ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅಂತಾರಾಷ್ಟ್ರೀಯ ಅಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಶ್ರೀನಿವಾಸ್ ಗಿರಿ ಆಯ್ಕೆ ಪತ್ರ ವಿತರಣೆ ಮಾಡಿದರು. ಜಿಲ್ಲೆ 268 ರ ಒಂದನೇ ಉಪ ಗರ್ವನರ್ ಎಚ್.ಮಾದೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net