ಕೆಎಸ್‌ಎಸ್ ವಿದ್ಯಾರ್ಥಿಗಳಿಂದ ನೇಜಿ ನಾಟಿ

New Project (13)
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ, ಐಕ್ಯುಎಸಿ ಘಟಕ ಆಶ್ರಯದಲ್ಲಿ ಭತ್ತ ಬೇಸಾಯ ರಕ್ಷಿಸುವಲ್ಲಿ ಯುವ ಜನತೆಯ ಪಾತ್ರ ಕಾರ್ಯಕ್ರಮದ ಅಂಗವಾಗಿ ನೇಜಿ ನಾಟಿ ಕಾರ್ಯಕ್ರಮ ಕಂದ್ರಪ್ಪಾಡಿ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ ಬುಧವಾರ ನಡೆಯಿತು.

ವಿದ್ಯಾರ್ಥಿಗಳು ಬುಧವಾರ ಕೆಸರು ತುಂಬಿದ ಗದ್ದೆಯಲ್ಲಿ ನೇಜಿ ನಾಟಿ ಮಾಡಿ ಖುಷಿಪಟ್ಟರು. ಕಾಲೇಜಿನ 45 ವಿದ್ಯಾರ್ಥಿಗಳು ನೇಜಿ ನಟ್ಟರು. ಪ್ರಾಂಶುಪಾಲ ಡಾ.ದಿನೇಶ್ ಪಿ.ಟಿ., ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಮುಖ್ಯಸ್ಥೆ ಲತಾ ಬಿ.ಟಿ., ಕೃಷಿಕ ಪ್ರೀತಮ್ ಮುಂಡೋಡಿ ಮಾರ್ಗದರ್ಶನ ನೀಡಿದರು. ಉಪನ್ಯಾಸಕರಾದ ಪುಷ್ಪ್ಪಾ ಡಿ., ಭರತ್ ಎಂ.ಎಲ್. ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net