

ಬೆಂಗಳೂರು: ಕೆಎಸ್‌ಆರ್‌ಟಿಸಿ ಮುಡಿಗೆ ಪ್ರತಿಷ್ಠಿತ ಮತ್ತೆರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಅತ್ಯುತ್ತಮ ಉದ್ಯೋಗದಾತ ಮತ್ತು ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉತ್ಕೃಷ್ಟ ಕೊಡುಗೆಗಾಗಿ ಏಷ್ಯನ್ ಲೀಡರ್‌ಶಿಪ್ ಮತ್ತು ಮಿಡಲ್ ಈಸ್ಟ್ ಲೀಡರ್ ಶಿಪ್-೨೦೨೩ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅ. ೧೧ರಂದು ತಾಜ್ ದುಬೈನಲ್ಲಿ ನಡೆಯಲಿದೆ. ಈ ಪ್ರಶಸ್ತಿಯನ್ನು ವಿಶ್ವದ ಮಾನವ ಸಂಪನ್ಮೂಲ ವೃತ್ತಿಪರರು ಹಾಗೂ ವಿಶ್ವ ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ ಸಂಸ್ಥೆಯು ಪ್ರತಿಷ್ಠಾಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.