ನೇಣು ಬಿಗಿದುಕೊಂಡು ಸಾರಿಗೆ ಸಂಸ್ಥೆ ನೌಕರ ಆತ್ಮಹತ್ಯೆ

3-RNR-1 mallikarjun badiger
Published on

ರಾಣೆಬೆನ್ನೂರ: ಸಾರಿಗೆ ಸಂಸ್ಥೆ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಾಗೋಡ ರಸ್ತೆಯ ಎನ್‌ಡ್ಲೂೃಕೆಎಸ್‌ಆರ್‌ಟಿಸಿ ಘಟಕದಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ದಾವಳಗಿ ಗ್ರಾಮದ ಮಲ್ಲಿಕಾರ್ಜುನ ಶಾಮಣ್ಣ ಬಡಿಗೇರ(49) ಮೃತ ನೌಕರ.
ಈತನು ಕಳೆದ ಹತ್ತು ವರ್ಷಗಳಿಂದ ಎನ್‌ಡ್ಲೂೃಕೆಎಸ್‌ಆರ್‌ಟಿಸಿಯ ರಾಣೆಬೆನ್ನೂರ ಘಟಕದಲ್ಲಿ ನಿರ್ವಾಹಕ ಕಮ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಭಾನುವಾರ ರಾತ್ರಿ ಸಾರಿಗೆ ಘಟಕದಲ್ಲಿಯೆ ಉಳಿದುಕೊಂಡು ಬೆಳಗಿನ ಜಾವ ಘಟಕದ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net