ಸಾರಿಗೆ ಮುಷ್ಕರ: ಮಾಸಿಕ ಪಾಸ್ ಅವಧಿ ವಿಸ್ತರಿಸಿ ಆದೇಶ

11HSN2
Published on

ಹಾಸನ: ನಾಲ್ಕು ದಿನ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಮಾಸಿಕ ಪಾಸ್ ಹೊಂದಿದ್ದವರಿಗೆ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ಡಿ. 11 ರಿಂದ 14ರ ವರೆಗೆ ಸಾರಿಗೆ ಇಲಾಖೆಯ ನೌಕರರು ಹಾಗೂ ಸಿಬ್ಬಂದಿ ಸೇವೆ ಕಾಯಂ ಮಾಡಿಕೊಳ್ಳುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ

ಆಗ್ರಹಿಸಿ ಮುಷ್ಕರದಲ್ಲಿ ಭಾಗಿಯಾಗಿದ್ದರಿಂದ ರಾಜ್ಯದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು.

ನಂತರ ಮಾಸಿಕ ಪಾಸ್ ಹೊಂದಿದ್ದವರು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಡಿ. 11 ರಿಂದ 14ರ ವರೆಗೆ ಚಾಲ್ತಿಯಲ್ಲಿರುವ ಪಾಸ್‌ಗಳಿಗೆ ನಾಲ್ಕು ದಿನಗಳ ಹೆಚ್ಚುವರಿ ಅವಧಿಯೊಂದಿಗೆ ನವೀಕರಿಸಿ ಕೊಡುವಂತೆ ಆಯಾ ವಿಭಾಗದ ಅಧಿಕಾರಿಗಳಿಗೆ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net