ಮುಂದಿನ ವರ್ಷ ಕೆಎಸ್‌ಆರ್‌ಟಿಸಿ ಡಿಪೋ ಸೇವೆಗೆ

Sri- ksrtc
ಶೃಂಗೇರಿ ತಾಲೂಕಿನ ತ್ಯಾವಣದಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಶಂಕುಸ್ಥಾಪನೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಚನ್ನಬಸಪ್ಪ, ಕಿರಣ್, ಮಹಾಬಲ, ದಿನೇಶ್ ಹೆಗ್ಡೆ ಇತರರು ಪಾಲ್ಗೊಂಡಿದ್ದರು.
Published on

ಶೃಂಗೇರಿ: ತಾಲೂಕಿನಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಆರಂಭಕ್ಕೆ ಇದ್ದ ತೊಂದರೆಗಳು ನಿವಾರಣೆಯಾಗಿದ್ದು, ತ್ಯಾವಣದಲ್ಲಿ ಜಾಗ ಅಧಿಕೃತವಾಗಿ ಮಂಜೂರಾಗಿದ್ದು ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ವಿದ್ಯಾರಣ್ಯಪುರ ಗ್ರಾಪಂ ತ್ಯಾವಣದಲ್ಲಿ ಶನಿವಾರ 4.23 ಎಕರೆ ಜಾಗದಲ್ಲಿ ಡಿಪೋ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಹತ್ತಾರು ವರ್ಷದ ಕನಸು ಸದ್ಯ ನನಸಾಗುತ್ತಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದೆ. ಎಂಟು ಕೋಟಿ ರೂಪಾಯಿ ಮಂಜೂರಾಗಿದ್ದು, ಮುಂದಿನ ವರ್ಷದಲ್ಲಿ ಡಿಪೋ ಆರಂಭವಾಗುವ ನಿರೀಕ್ಷೆ ಇದೆ. ಡಿಪೋ ಆರಂಭದಿಂದ ಗ್ರಾಮೀಣ ಭಾಗಕ್ಕೆ ಬಸ್ ಸೇವೆ ದೊರಕಲಿದ್ದು, ವಿವಿಧ ಜಿಲ್ಲಾ ಕೇಂದ್ರಗಳಿಗೂ ಸಂಪರ್ಕ ದೊರಕುತ್ತದೆ ಎಂದು ಹೇಳಿದರು.
ಮುಖಂಡರಾದ ಕೆ.ಆರ್.ವೆಂಕಟೇಶ್, ಪುಟ್ಟಪ್ಪ ಹೆಗ್ಡೆ, ಮಹಾಬಲ, ದಿನೇಶ್ ಹೆಗ್ಡೆ, ಸುನಿಲ್, ರಾಜಕುಮಾರ್ ಹೆಗ್ಡೆ, ನಟರಾಜ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳಾದ ಚನ್ನಬಸಪ್ಪ, ಶ್ರೀಧರಸ್ವಾಮಿ, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net