

ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಕರ್ತವ್ಯದ ಮೇಲೆ ಬೆಂಗಳೂರಿಗೆ ಬಂದಿದ್ದ ನಿರ್ವಾಹಕರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ವೊಂದರಲ್ಲಿ ಈ ಪ್ರಕರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯ ರವೀಂದ್ರ ಪಡೆಯನ್ನವರ್ (49) ಮೃತಪಟ್ಟವರು.
ಬಾಗಲಕೋಟೆ ಜಿಲ್ಲೆಯ ಬೀಳಗಿ ಡಿಪೋಗೆ ಸೇರಿದ ಬಸ್ನಲ್ಲಿ ರವೀಂದ್ರ ನಿರ್ವಾಹಕರಾಗಿದ್ದರು. ನಿನ್ನೆ ರಾತ್ರಿ 7.30ಕ್ಕೆ ಹೊರಟ ಬಸ್ ನಂ. KA 29, F 1462ರಲ್ಲಿ ಕರ್ತವ್ಯದಲ್ಲಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರು ತಲುಪಿದ ಬಳಿಕ ಉಪಾಹಾರಕ್ಕಾಗಿ ತೆರಳಿದ್ದರು.
ಪಾರ್ಕಿಂಗ್ನಲ್ಲಿ ಬಸ್ ನಿಲ್ಲಿಸಿದ ಬಳಿಕ ತಿಂಡಿ ತಿನ್ನುತ್ತಿದ್ದ ಅವರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.