ಉಡುಪಿಯಲ್ಲಿ ಕೆ ಎಸ್ ಆರ್ ಟಿಸಿ ಬಸ್ ಸೇವೆ ಆರಂಭ

Published on

ಉಡುಪಿ: ಲಾಕ್ಡೌನ್ ವಿಸ್ತರಣೆಯಾಗಿರುವ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಕೆಎಸ್ಆರ್ ಟಿಸಿ ಬಸ್ ಸೇವೆ ಸೋಮವಾರದಿಂದ ಆರಂಭವಾಗಿದೆ. ಜಿಲ್ಲೆಯಲ್ಲಿ ಅಗತ್ಯತೆಗಳನ್ನು ಆಧರಿಸಿ ಹುಬ್ಬಳ್ಳಿ, ಶಿವಮೊಗ್ಗ, ಬಾಗಲಕೋಟ ಮತ್ತು ಬೆಂಗಳೂರಿಗೆ ಸುಮಾರು ೧೫ ಬಸ್ಸುಗಳು ತೆರಳಲಿವೆ. ಬಸ್‌ನ ಆಸನಗಳ ಸಾಮರ್ಥ್ಯದ ಕೇವಲ 50% ಪ್ರಯಾಣಿಕರಿಗೆ ಮಾತ್ರ ಅನುಮತಿ ಇದೆ. ಕುಂದಾಪುರ ಮತ್ತು ಕಾರ್ಕಳಕ್ಕೂ ಬಸ್ಸುಗಳು ಸಂಚರಿಸುತ್ತಿದ್ದು , ಖಾಸಗಿ ಬಸ್ ಗಳು ಇನ್ನೂ ಕಾರ್ಯಾಚರಣೆ ಪ್ರಾರಂಭಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net