

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್ ಕಳವು ಪ್ರಕರಣಗಳು ಮುಂದುವರಿದಿದ್ದು ಇದೀಗ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಲ್ಯಾಪ್‌ಟಾಪ್ ಕಳವು ಮಾಡಲಾಗಿದೆ.
ಹುಬ್ಬಳ್ಳಿ ಪಿಡಬ್ಲುೃಡಿ ಕ್ವಾರ್ಟರ್ಸ್ ನಿವಾಸಿ ಸ್ಪೂರ್ತಿ ರೆಡ್ಡಿ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳೆದುಕೊಂಡವರು. ಬೆಂಗಳೂರಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ದ, ಮಕರ ಸಂಕ್ರಾಂತಿ ನಿಮಿತ್ತ ಶಿವಮೊಗ್ಗದ ಸ್ನೇಹಿತೆ ಮನೆಗೆ ಬಂದಿದ್ದರು.
ಹಬ್ಬ ಮುಗಿಸಿ ಹುಬ್ಬಳ್ಳಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ಗೆ ಬಂದು ಶಿವಮೊಗ್ಗ-ಪಣಜಿ ಬಸ್ ಹತ್ತಿದ್ದರು. ಈ ವೇಳೆ ಬಾಯಾರಿಕೆಯಾಗಿ ನೀರಿನ ಬಾಟಲಿ ತರಲು ಇಳಿದು ಹೋದಾಗ ಸೀಟಿನಲ್ಲಿಟ್ಟಿದ್ದ ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಕಳವು ಮಾಡಲಾಗಿದೆ.