ಕಳಚೆ-ಈರಾಪುರ ರಸ್ತೆಯಲ್ಲಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿ

YLP BUS PULTI
Published on

ಯಲ್ಲಾಪುರ: ಕೆಎಸ್​ಆರ್​ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ತಾಲೂಕಿನ ಕಳಚೆ-ಈರಾಪುರ ರಸ್ತೆಯಲ್ಲಿ ಸಂಭವಿಸಿದೆ.

ಈರಾಪುರದಿಂದ ಕಳಚೆಗೆ ಹೊರಟಿದ್ದ ಯಲ್ಲಾಪುರ ಘಟಕದ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗಟಾರದಲ್ಲಿ ಬಿದ್ದಿದೆ. ಶನಿವಾರ ರಾತ್ರಿ ಹಾಲ್ಟಿಂಗ್​ಗೆ ತೆರಳಿದ್ದ ಬಸ್ ಭಾನುವಾರ ಬೆಳಗ್ಗೆ ಈರಾಪುರದಿಂದ ಕಳಚೆಗೆ ಹೋಗಿ ಯಲ್ಲಾಪುರಕ್ಕೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಬೈಕ್ ತಪ್ಪಿಸಲು ಹೋಗಿ ಗಟಾರದಲ್ಲಿ ಬಿದ್ದಿದೆ. ಬಸ್​ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಜಖಂ ಆಗಿದ್ದು, ಕ್ರೇನ್ ಬಳಸಿ ಬಸ್ ಮೇಲಕ್ಕೆತ್ತಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net