ಸ್ಕೈವಾಕರ್ ಪಿಲ್ಲರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

23KDR1 (1)
ಕಡೂರಿನ ಅಂಚೆಚೋಮನಹಳ್ಳಿ ಸಮೀಪ ಕೆಎಸ್‌ಆರ್‌ಟಿಸಿ ಬಸ್ ಸ್ಕೈವಾಕರ್ ಪಿಲ್ಲರ್‌ಗೆ ಡಿಕ್ಕಿಯಾಗಿರುವುದು.
Published on

ಕಡೂರು: ತಾಲೂಕಿನ ಅಂಚೆ ಚೋಮನಹಳ್ಳಿ ಗೇಟ್ ಮತ್ತು ತಂಗಲಿ ಸಮೀಪ ಶನಿವಾರ ನಡೆದ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾಳೆ. ಅಂಚೆ ಚೋಮನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಡಿವೈಡರ್ ಹತ್ತಿ ಸ್ಕೈವಾಕರ್ ಪಿಲ್ಲರ್‌ಗೆ ಶನಿವಾರ ಬೆಳಗ್ಗೆ ಡಿಕ್ಕಿ ಹೊಡೆದಿದೆ. ಬಸ್‌ನಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಹೊರತುಪಡಿಸಿ ಪ್ರಯಾಣಿಕರು ಯಾರು ಲ್ಲದಿದ್ದರಿಂದ ಭಾರಿ ದುರಂತ ತಪ್ಪಿದಂತಾಗಿದೆ. ಇದೇ ಬಸ್ ಭದ್ರಾವತಿಯಲ್ಲಿ ಕೆಟ್ಟುನಿಂತು ರಿಪೇರಿ ಮಾಡಿಕೊಂಡು ಅರಸೀಕೆರೆ ಡಿಪೋಗೆ ತೆರಳುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್‌ನಲ್ಲಿದ್ದ ಮೆಕ್ಯಾನಿಕ್, ಚಾಲಕನಿಗೆ ಗಾಯಗಲಾಗಿದ್ದು, ಶಿವಮೊಗ್ಗದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net