ಟಯರ್​ ಸ್ಫೋಟಗೊಂಡು ಕೆಎಸ್​ಆರ್​ಟಿಸಿ ಅಪಘಾತ

Untitled-1
ದೊಡ್ಡಬಳ್ಳಾಪುರದ ಮೇಣಿಸಿಗೇಟ್​ ಬಳಿಯ ತಡೆಗೋಡೆಗೆ ಕೆಎಸ್​ಆರ್​ಟಿಸಿ ಬಸ್​ ಗುದ್ದಿರುವುದು.
Published on

ದೊಡ್ಡಬಳ್ಳಾಪುರ : ತಾಲೂಕಿನ ಮೆಣಸಿ ಗೇಟ್​ ಬಳಿಯ ದಾಬಸ್​ಪೇಟೆ&ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ&648ರಲ್ಲಿ ಟಯರ್​ ಸ್ಫೋಟಗೊಂಡು ಚಾಲಕನ ನಿಯಂತ್ರಣ ತಪ್ಪಿದ ಕೆಎಸ್​ಆರ್​ಟಿಸಿ ಬಸ್​ ರಸ್ತೆಯ ತಡೆಗೋಡೆಗೆ ಗುದ್ದಿದೆ. ಬಸ್​ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಸೂಲಿಕುಂಟೆ&ದೊಡ್ಡಬಳ್ಳಾಪುರ ಮಾರ್ಗವಾಗಿ ದೊಡ್ಡಬಳ್ಳಾಪುರ ನಗರಕ್ಕೆ ಬರುವ ವೇಳೆ ಅವಡ ಸಂಭವಿಸಿದೆ. ಚಾಲಕ ಮುನಿಶ್ಯಾಮಪ್ಪ ಅವರ ಸಮಯ ಪ್ರೆಯಿಂದ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರ ಪ್ರಾಣ ಉಳಿದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net