

ಮಡಿಕೇರಿ:
ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ ಕಡಿಮೆ ಮಾಡಿರುವ ಆರೋಪ ಕೇಳಿ ಬರುತ್ತಿದೆ. ಅದರಲ್ಲೂ ಜಿಲ್ಲೆಯೊಳಗೆ ಸಂಚರಿಸುವ ಬಸ್‌ಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವವರಿಗೆ ದೊಡ್ಡ ಮಟ್ಟಿಗೆ ಸಮಸ್ಯೆ ಆಗುತ್ತಿದೆ. ಅದರಲ್ಲೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಉಯೋಜನೆಯ ಪ್ರಯೋಜನ ಮಹಿಳೆಯರಿಗೆ ಸಮರ್ಪಕವಾಗಿ ತಲುಪುವಲ್ಲೂ ಸಮಸ್ಯೆ ಆಗಿದೆ.
ಕುಶಾಲನಗರ-ಮಡಿಕೇರಿ ಮಧ್ಯೆ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಬಸ್‌ಗಳು ಇಲ್ಲದೆ ಪ್ರಯಾಣಿಕರು ಪರದಾಡುವಂತಾಗುತ್ತಿದೆ. ಕುಶಾಲನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಪ್ರತಿನಿತ್ಯ ಮಡಿಕೇರಿಗೆ ಸಂಚರಿಸುತ್ತಿದ್ದು, ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಈ ಸಂಖ್ಯೆ ದ್ವಿಗುಣ ಆಗಿದೆ. ಆದರೆ ಸೂಕ್ತ ಸಮಯಕ್ಕೆ ಬಸ್‌ಗಳು ಸಿಗದೇ ಕಚೇರಿ ವೇಳೆಗೆ ತಲುಪಲಾಗದ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಂಗಳೂರು, ಮೈಸೂರು, ಹಾಸನ ಕಡೆಯಿಂದ ಮಡಿಕೇರಿಗೆ ಬರುವ ಬಸ್‌ಗಳು ಕುಶಾಲನಗರಕ್ಕೆ ಬರುವಾಗಲೇ ಭರ್ತಿ ಆಗಿರುತ್ತದೆ. ಇದರಿಂದಾಗಿ ಕೂರಲು ಸೀಟ್ ಸಿಗುವುದಿರಲಿ ನಿಂತುಕೊAಡು ಹೋಗಲು ಕೂಡ ಸಾಧ್ಯ ಆಗುತ್ತಿಲ್ಲ ಎನ್ನುತ್ತಾರೆ ಪ್ರಯಾಣಿಕರು.
ಕುಶಾಲನಗರದಲ್ಲಿ ಬಸ್ ಡಿಪೋ ಆದರೆ ಸಮಸ್ಯೆಗಳು ಪರಿಹಾರ ಆಗಬಹುದು ಎನ್ನುವ ನಿರೀಕ್ಷೆ ಇದೆ. ವಿರಾಜಪೇಟೆಯಲ್ಲೂ ಡಿಪೋ ಆರಂಭಿಸುವ ಚಿಂತನೆ ಕೆಎಸ್‌ಆರ್‌ಟಿಸಿಗೆ ಇದೆ ಎನ್ನಲಾಗುತ್ತಿದೆ. ಸದ್ಯ ಮಡಿಕೇರಿಯಲ್ಲಿ ಮಾತ್ರ ಡಿಪೋ ಇದ್ದು, ಉಳಿದ 2 ಕಡೆಗಳಲ್ಲಿ ಡಿಪೋ ಆರಂಭವಾದರೆ ಬಹುತೇಕ ಸಮಸ್ಯೆಗಳು ನಿವಾರಣೆ ಆಗಲಿದೆ ಎನ್ನುತ್ತಾರೆ ಜನಪ್ರತಿನಿಧಿಗಳು. ಅಲ್ಲಿಯ ತನಕ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಕುಶಾಲನಗರ ಮತ್ತು ಮಡಿಕೇರಿ ಮಧ್ಯೆ ತಡೆರಹಿತ ಬಸ್‌ಗಳ ಸಂಚಾರ ಆರಂಭಿಸುವ ಅಗತ್ಯವಿದೆ. ಈಗ ಈ ಎರಡು ಪಟ್ಟಣಗಳ ಮಧ್ಯೆ ಓಡಾಡುತ್ತಿರುವ ಗ್ರಾಮೀಣ ಸಾರಿಗೆ ಬಸ್‌ಗಳು ನಿಗದಿತ ಸಂಖ್ಯೆಯಲ್ಲಿ ನಿಗದಿತ ಸಮಯದಲ್ಲಿ ಸಂಚರಿಸುವAತೆ ನೋಡಿಕೊಳ್ಳಬೇಕು. ಮೈಸೂರು, ಬೆಂಗಳೂರು, ಹಾಸನ ಮತ್ತಿತರ ಭಾಗಗಳಿಂದ ಕುಶಾಲನಗರಕ್ಕಾಗಿ ಮಡಿಕೇರಿಗೆ ಮತ್ತು ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ದೂರದ ಪ್ರದೇಶಗಳಿಗೆ ಸಂಚರಿಸುವ ಬಸ್‌ಗಳ ಓಡಾಟದ ಸಮಯ ಸರಿಯಾಗಿ ನಿಯಂತ್ರಿಸಬೇಕು. ಇದರಿಂದ ಈ ಮಾರ್ಗದ ಬಹುತೇಕ ಸಮಸ್ಯೆ ನಿವಾರಣೆ ಆಗಬಹುದು.
ಬಿ.ಸಿ. ದಿನೇಶ್, ಕೊಡಗರಹಳ್ಳಿ ನಿವಾಸಿ
ಕೊಡಗು ಜಿಲ್ಲೆಯಲ್ಲಿ ಅನೇಕ ಕುಗ್ರಾಗಮಗಳು ಇದ್ದು ಅಲ್ಲಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಜನರ ಪರದಾಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಸ್ ಘಟಕಗಳು ಇದ್ದರೆ ಜನರಿಗೂ ಅನುಕೂಲ ಆಗಲಿದೆ. ಇದರಿಂದ ಹೆಚ್ಚು ಬಸ್ ಸಂಚರಿಸಲಿದೆ. ಈ ಸೇವೆಯಿಂದ ಜನರಿಗೆ ನಗರಕ್ಕೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ.
ಲತಾಶ್ರೀ ಸುಪ್ರೀತ್, ಉದ್ಯೋಗಿ, ಗೋಣಿಕೊಪ್ಪಲು
ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿಯ ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆ ಇದೆ. ಇರುವ ಬಸ್ ಗಳೂ ಹಳೆಯದಾಗಿವೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ತೊಂದರೆ ಆಗಿದೆ. ಆಗಾಗ್ಗೆ ಬಸ್‌ಗಳು ರಿಪೇರಿ ಆಗಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಈ ಭಾಗದ ರೈತರ ಕೂಗು ಅರಣ್ಯರೋದನ ಆಗಿದೆ.
ದಿವಾಕರ್, ಕೃಷಿಕ, ಕೂತಿ ಗ್ರಾಮ.
ಶಾಲಾ, ಕಾಲೇಜು ಸಮಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ. ಕೆಲವೊಮ್ಮೆ ಡೋರ್‌ನಲ್ಲಿ ವಿದ್ಯಾರ್ಥಿಗಳು ನೇತಾಡಿಕೊಂಡು ಪ್ರಯಾಣಿಸುವುದನ್ನು ನೋಡಿದರೆ ಭಯವಾಗುತ್ತದೆ. ಶಾಲಾ ಸಮಯದಲ್ಲಿ ಹೊಸ ಬಸ್‌ಗಳನ್ನು ಕಲ್ಪಿಸಿಕೊಡಬೇಕು. ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು.
ಇಬ್ಬನಿ ಲೋಕೇಶ್, ಬಜೆಗುಂಡಿ, ಸೋಮವಾರಪೇಟೆ
ಕೊಡಗಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಅನೇಕ ಪಟ್ಟಣಗಳಲ್ಲಿ ಸರಿಯಾಗಿ ಬಸ್ ನಿಲ್ದಾಣ ಇಲ್ಲ. ಇದರಿಂದ ಯಾವ ಬಸ್ ಯಾವ ಸಮಯದಲ್ಲಿ ಬರುತ್ತದೆ ಎಂದು ಪ್ರಯಾಣಿಕರಿಗೆ ತಿಳಿಯುತ್ತಿಲ್ಲ. ಬೆಂಗಳೂರು, ಮೈಸೂರು ಮುಂತಾದ ನಗರ ಪ್ರದೇಶಗಳಿಗೆ ತೆರಳುವ ಬಸ್‌ಗಳು ಕೆಲವೇ ನಿಮಿಷಗಳು ಮಾತ್ರ ಕೆಲವು ಪಟ್ಟಣಗಳಲ್ಲಿ ನಿಲ್ಲುತ್ತದೆ. ಈ ಸಮಸ್ಯೆ ಅನೇಕ ವರ್ಷಗಳ ಸಮಸ್ಯೆ ಆಗಿದ್ದು ಇದನ್ನು ಗಂಭೀರವಾಗಿ ತೆಗೆದುಕೊಂಡು ಸರಿಪಡಿಸಬೇಕು.
ಪುನೀತ್ ತಾಳೂರು, ಸಮಾಜ ಸೇವಕ, ಶನಿವಾರಸಂತೆ
ಜಿಲ್ಲೆಯಲ್ಲಿ ಇತ್ತೀಚೆಗೆ ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವAಥ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಖ್ಯೆ ತೀರ ವಿರಳವಾಗಿದೆ. ಕೆಲವು ಮಾರ್ಗಗಳಲ್ಲಿ ಸಂಚರಿಸುತಿದ್ದ ಬಸ್‌ಗಳು ಸಂಚಾರ ನಿಲ್ಲಿಸಿದ್ದು ವಿದ್ಯಾರ್ಥಿಗಳು, ಸಾರ್ವಜನಿಕರು ನಗರ ಪ್ರದೇಶಕ್ಕೆ ಸರಿಯಾದ ಸಮಯಕ್ಕೆ ತಲುಪಲು ಆಟೋಗಳಂಥ ಖಾಸಗಿ ವಾಹನದ ಮೋರೆ ಹೋಗುವ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಇದರ ಕಡೆ ಗಮನ ಹರಿಸಿ ವಿರಾಜಪೇಟೆ ಅಥವಾ ಕುಶಾಲನಗರದಲ್ಲಿ ನೂತನ ಡಿಪೋ ಆರಂಭಿಸಿ ಜಿಲ್ಲೆಯಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು.
ಹೆಚ್.ಎಸ್. ವಿಕಾಸ್, ವಿರಾಜಪೇಟೆ.
ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ತೀರಾ ಕಡಿಮೆಯಾಗಿದೆ. ಪ್ರಯಾಣಿಕರು ಪ್ರತಿನಿತ್ಯ ಸಂಕಷ್ಟ ಎದುರಿಸುವಂತೆ ಆಗಿದೆ . ಅದರಲ್ಲೂ ಗ್ರಾಮೀಣ ಭಾಗಗಳಿಗೆ ಸಂಚರಿಸುವ ಬಸ್‌ಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದು ಈ ಮೊದಲು ವಿರಾಜಪೇಟೆ ಮೈಸೂರು ಮಾರ್ಗವಾಗಿ ಹೆಚ್ಚಿನ ಬಸ್‌ಗಳು ಸಂಚರಿಸುತ್ತಿದ್ದವು. ಇದೀಗ ಬಸ್‌ಗಳ ಸಂಖ್ಯೆ ತೀರ ಕಡಿಮೆಯಾಗಿದ್ದು ಎರಡು ಬಸ್‌ನಲ್ಲಿ ಪ್ರಯಾಣಿಸುವ ಜನರು ಒಂದು ಬಸ್‌ನಲ್ಲಿ ಸಂಚರಿಸುವAಥ ಪರಿಸ್ಥಿತಿ ಬಂದಿದೆ.
ಬಿ.ಪಿ. ಅನನ್ಯ, ವಿದ್ಯಾರ್ಥಿ, ವಿರಾಜಪೇಟೆ.
ಕೊಡಗು ಜಿಲ್ಲೆಗೆ ಸಂಬAಧಪಟ್ಟAತೆ ಮುಖ್ಯ ನಿರ್ವಹಣಾ ಘಟಕ ಪುತ್ತೂರಿನಲ್ಲಿದೆ. ಜಿಲ್ಲೆಯಲ್ಲಿ ಅವಶ್ಯವಿದ್ದಾಗ ತುರ್ತು ಬಸ್ ವ್ಯವಸ್ಥೆಗಾಗಿ ಪುತ್ತೂರಿನಿಂದ ಬಸ್ ಬರುವವರೆಗೂ ಕಾಯಬೇಕಾಗುತ್ತದೆ. ಮುಖ್ಯ ನಿರ್ವಹಣಾ ಘಟಕವನ್ನು ಮಡಿಕೇರಿ ಅಥವಾ ಕುಶಾಲನಗರದಲ್ಲಿ ಸ್ಥಾಪಿಸಿದಲ್ಲಿ ಜಿಲ್ಲೆಯ ಸಾರ್ವಜನಿಕರಿಗೆ ಎಲ್ಲಾ ರೀತಿಯಲ್ಲೂ ಅನುಕೂಲ ವಾಗುವುದು. ಸದ್ಯ ಮಡಿಕೇರಿಯಲ್ಲಿ ಮಾತ್ರ ಬಸ್ ಡಿಪೋ ಇದ್ದು ಕುಶಾಲನಗರದಲ್ಲಿ ಬಸ್ ಡಿಪೋ ಸದ್ಯದಲ್ಲೇ ಆಗಲಿದೆ. ಅಲ್ಲಿ ಮುಖ್ಯ ಕಾರ್ಯನಿರ್ವಹಣಾ ಘಟಕ ಆದಲ್ಲಿ ತುರ್ತು ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಬಹುದು.
ಕೂರನ ಸುಶೀಲಾ ಅಪ್ಪಾಜಿ, ಸಾಮಾಜಿಕ ಕಾರ್ಯಕರ್ತೆ, ಪಾಕ, ಚೆರಂಬಾಣೆ
ಕಾಡಾನೆ ಸಮಸ್ಯೆ ಮತ್ತು ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದೆ ತುಂಬಾ ತೊಂದರೆ ಉಂಟಾಗಿದೆ. ಮಕ್ಕಳನ್ನು ಶಾಲೆಯಿಂದ ವಾಪಸ್ ಕರೆದುಕೊಂಡು ಬರಲು ಪಾಲಕರು ಕೆಲಸ ನಿಲ್ಲಿಸಿ ಸಂಜೆ ಶಾಲೆ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಶಿಕ್ಷಕರಿಗೂ ತೊಂದರೆಯಾಗುತ್ತಿದೆ. ಶಿಕ್ಷಕರು ಮನೆ ತಲುಪುವಾಗ ರಾತ್ರಿಯಾಗುತ್ತಿದೆ. ಶಿಕ್ಷಕಿಯರ ದೈನಂದಿನ ಚಟುವಟಿಕೆಗೂ ಮತ್ತು ಪ್ರಯಾಣದ ತೊಂದರೆಗಳ ಕುರಿತು ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲ.
ಸೌಮ್ಯಾ, ಕರಡಿಗೋಡು ನಿವಾಸಿ, ಸಿದ್ದಾಪುರ
ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಮಸ್ಯೆ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಮತ್ತು ಸಂಬAಧಿಸಿದ ಸಚಿವರ ಜತೆ ಚರ್ಚೆ ಮಾಡಲಾಗಿದೆ. ಕುಶಾಲನಗರದಲ್ಲಿ ಡಿಪೋ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಅಲ್ಲಿ ಡಿಪೋ ಕಾರ್ಯಾರಂಭ ಮಾಡಿದರೆ ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಅಲ್ಲಿಯ ತನಕ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ