

ಮಡಿಕೇರಿ:
ಮಡಿಕೇರಿ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಲಾಭದಾಯಕ ಮಾರ್ಗ ಎಂದು ಪರಿಗಣಿಸಿರುವ ಕುಶಾಲನಗರ-ಮಡಿಕೇರಿ ಮಧ್ಯೆ ಕಳೆದ ಒಂದು ತಿಂಗಳಿನಿAದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲ. ಪ್ರತಿನಿತ್ಯ ಈ ಮಾರ್ಗದಲ್ಲಿ ಓಡಾಡುವವರು ಇದರಿಂದ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ಮಾಡಿರುವ ತಾಂತ್ರಿಕ ಎಡವಟ್ಟು ಒಂದರಿAದ ಈ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಆರೋಪಿಸುತ್ತಾರೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ.
32 ಕಿ.ಮೀ.ಗೆ 32 ಸ್ಟೇಜ್‌ಗಳು...ಕೆಎಸ್‌ಆರ್‌ಟಿಸಿಯ ಯಾವುದೇ ವಿಭಾಗಗಳಲ್ಲಿ ಇಲ್ಲದಿರುವ ಇಂಥ ಅವೈಜ್ಞಾನಿಕ ಸ್ಟೇಜ್ ಪದ್ಧತಿಯನ್ನು ಕುಶಾಲನಗರ -ಮಡಿಕೇರಿ ನಡುವಿನ ಸಾಮಾನ್ಯ ಸಾರಿಗೆ ಮಾರ್ಗದಲ್ಲಿ ಅಳವಡಿಸಲಾಗಿದೆ. ಕೆಎಸ್‌ಆರ್‌ಟಿಸಿಯಲ್ಲಿ ಸ್ಟೇಜ್‌ಗಳ ಆಧಾರದಲ್ಲಿ ದರ ನಿಗದಿಪಡಿಸಿ ಟಿಕೆಟ್ ಕೊಡುವ ವ್ಯವಸ್ಥೆ ಇದ್ದು, ಈ ಮೊದಲು ಕುಶಾಲನಗರ -ಮಡಿಕೇರಿ ನಡುವಿನ ಸಾಮಾನ್ಯ ಸಾರಿಗೆಯ 32 ಕಿಮೀ ಮಾರ್ಗದಲ್ಲಿ 5 ಮುಖ್ಯ ಮತ್ತು 5 ಉಪ ಹಂತಗಳಿತ್ತು. ಆದರೆ ಈಗ 32 ಕಿಮೀ ಮಾರ್ಗದಲ್ಲಿ ಈಗ 32 ಸ್ಟೇಜ್‌ಗಳನ್ನು ಅಳವಡಿಸಿರುವುದು ನಿರ್ವಾಹಕರನ್ನು ಕಂಗೆಡಿಸಿದೆ.
ಈ ಮಾರ್ಗದಲ್ಲಿ 2022 ಆ. 13ರಿಂದ ಹಂತ, ಉಪಹಂತ ಸೇರಿ ಒಟ್ಟು 32 ಸ್ಟೇಜ್‌ಗಳನ್ನು ಅಳವಡಿಸಲಾಗಿದೆ. ಆದರೆ ಈ ತಿಂಗಳರಾAಭದಲ್ಲಿ ನೂತನ ಟಿಕೆಟ್ ಯಂತ್ರಗಳನ್ನು ಪರಿಚಯಿಸಿದ ನಂತರ ಕುಶಾಲನಗರ -ಮಡಿಕೇರಿ ನಡುವಿನ ಸಾಮಾನ್ಯ ಸಾರಿಗೆ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ನಿರ್ವಾಹಕರ ಸಮಸ್ಯೆ ಬಿಗಡಾಯಿಸಿದೆ. ಈ ಮಾರ್ಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಿದರೆ ರಜೆ ಹಾಕುವಷ್ಟರ ಮಟ್ಟಿಗೆ ನಿರ್ವಾಹಕರು ಇಲ್ಲಿ ಕಾರ್ಯ ನಿರ್ವಹಿಸಲು ಹಿಂಜರಿಯುತ್ತಿದ್ದಾರೆ.
ಈ ಮಾರ್ಗದಲ್ಲಿ ಅಳವಡಿಸಿರುವ ಹೊಸ ಹಂತಗಳನ್ನು ರದ್ದುಪಡಿಸಿ ಹೊಸ ಎಲೆಕ್ಟಾçನಿಕ್ ಟಿಕೆಟ್ ಯಂತ್ರದಲ್ಲಿ ಹಳೆಯ ಹಂತಗಳನ್ನು ಮುಂದುವರಿಸಿಕೊಡುವAತೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಮೌಖಿಕವಾಗಿ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರಿಗೆ ಲಿಖಿತವಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಕಾಂಗ್ರೆಸ್ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ ಜಾರಿಯಾದ ನಂತರ ಕುಶಾಲನಗರ -ಮಡಿಕೇರಿ ಮಾರ್ಗದಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ತೀವ್ರವಾಗಿ ಹೆಚ್ಚಳವಾಗಿದೆ. ಈ ಮಧ್ಯೆ ಕೆಎಸ್‌ಆರ್‌ಟಿಸಿ ಹೊಸ ಇಟಿಎಂಗಳನ್ನು ನಿರ್ವಾಹಕರಿಗೆ ನೀಡಿದೆ. ಮೊದಲಿನ ಬಟನ್ ಸ್ವಿಚ್ ಇದ್ದ ಜಾಗದಲ್ಲಿ ಈಗ ಯಂತ್ರ ಸಂಪೂರ್ಣ ಟಚ್‌ಸ್ಕಿçÃನ್ ಮೂಲಕ ಕೆಲಸ ಮಾಡುತ್ತದೆ. ಇದರಲ್ಲಿ ಪ್ರಯಾಣಿಕರಿಗೆ ಒಂದು ಟಿಕೆಟ್ ವಿತರಣೆ ಮಾಡಲು ನಾಲ್ಕು ಬಾರಿ ಆಯ್ಕೆಗಳನ್ನು ಮಾಡಬೇಕಾಗಿರುತ್ತದೆ. ಇದಕ್ಕೆ ಹೆಚ್ಚು ಸಮಯ ಹಿಡಿಯಲಿದ್ದು, ಕುಶಾಲನಗರ - ಮಡಿಕೇರಿ ಗ್ರಾಮಾಂತರ ಸಾರಿಗೆಯಲ್ಲಿ ಅಳವಡಿಸಿರುವ ಸ್ಟೇಜ್‌ಗಳು ತುಂಬಾ ಹತ್ತಿರದಲ್ಲಿ ಇರುವುದರಿಂದ ನಿಗದಿತ ಅವಧಿಯಲ್ಲಿ ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತದೆ. ತಮ್ಮದಲ್ಲದ ತಪ್ಪಿಗೆ ದೋಷಾರೋಪಣ ಪತ್ರ ಪಡೆಯುವುದು ಮತ್ತು ಶಿಕ್ಷೆ ಅನುಭವಿಸುವ ಹಾಗೆ ಆಗಿದೆ ಎಂದು ನಿರ್ವಾಹಕರು ಮತ್ತು ಚಾಲನಾ ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.
ಈಗಿನ ಸ್ಟೇಜ್ ವ್ಯವಸ್ಥೆಯಲ್ಲಿ ಒಂದು ಸ್ಟೇಜ್‌ನಲ್ಲಿ ಪ್ರಯಾಣಿಕರು ಬಸ್ ಹತ್ತಿ ತಮ್ಮ ಆಸನದಲ್ಲಿ ಕುಳಿತುಕೊಳ್ಳುವ ಮೊದಲೇ ಮತ್ತೊಂದು ಸ್ಟೇಜ್ ಬರುವುದರಿಂದ ನಿರ್ವಾಹಕರು ಟಿಕೆಟ್ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬಸ್ ನಿಲ್ಲಿಸಿ ಟಿಕೆಟ್ ವಿತರಣೆ ಮಾಡಿದರೆ ತಡವಾಗುತ್ತದೆ ಎಂದು ಪ್ರಯಾಣಿಕರು ಬಸ್ ಸಿಬ್ಬಂದಿ ಜತೆ ಜಗಳ ಆರಂಭಿಸುತ್ತಾರೆ. ಈ ಸಮಸ್ಯೆಗಳ ಮಧ್ಯೆಯೂ ಟಿಕೆಟ್ ವಿತರಣೆ ಮಾಡಿ ಉಪಹಂತಗಳಿಗೆ ತಲುಪಿದ ಸಂದರ್ಭ ತನಿಖಾಧಿಕಾರಿಗಳು ಬಂದರೆ 'ನಮ್ಮನ್ನು ನೋಡಿ ಟಿಕೆಟ್ ವಿತರಣೆ ಮಾಡಿರುವೆ' ಎಂದು ಆನ್‌ಸೈಟ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸುತ್ತಾರೆ. ಇದರಿಂದಾಗಿ ನಿರ್ವಾಹಕರು ಮಾನಸಿಕವಾಗಿ ಕುಗ್ಗಿ ಹೋಗಿ ಈ ಸಾಮಾನ್ಯ ಸಾರಿಗೆಗಳಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುವಂತಾಗಿದೆ ಎನ್ನುತಾರೆ ಸಿಬ್ಬಂದಿ.
ಸಾಮಾನ್ಯ ಸಾರಿಗೆಗಳಲ್ಲಿ ಈ ರೀತಿಯಾದ ಹೆಚ್ಚಿನ ಹಂತಗಳನ್ನು ಅಳವಡಿಸಿರುವುದರಿಂದ ಅನಿವಾರ್ಯವಾಗಿ ಬಸ್ ನಿಲ್ಲಿಸಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಇದರಿಂದ ಸಂಸ್ಥೆ ನಿಗದಿ ಪಡಿಸಿರುವ ಸಮಯಕ್ಕೆ ತಲುಪಲಾಗದೆ ಹಿಂದಿನ ಅನುಸೂಚಿಗಳಿಗೆ ತೊಂದರೆ ಆಗುತ್ತಿದೆ. ಕೆಎಸ್‌ಆರ್‌ಟಿಸಿಯಲ್ಲಿ ಒಂದು ಹಂತದಿAದ ಇನ್ನೊಂದು ಹಂತಕ್ಕೆ ಆರರಿಂದ ಏಳು ಕಿಲೋಮೀಟರ್ ಮತ್ತು ಉಪ ಹಂತಗಳು 2.5 ಕಿ.ಮೀ. ನಿಂದ 3 ಕಿ ಮೀ ಅಂತರ ಇಡಲಾಗಿದೆ. ಈ ವ್ಯವಸ್ಥೆಯಲ್ಲೇ ಟಿಕೆಟ್ ವಿತರಣೆ ಮಾಡಲು ನಿರ್ವಾಹಕರು ಪರದಾಡುವ ಸ್ಥಿತಿ ಇದೆ. ಇಂಥ ಪರಿಸ್ಥಿತಿಯಲ್ಲಿ ಹೊಸದಾಗಿ ಅಳವಡಿಸಿರುವ ಕೆಲವು ಉಪ ಹಂತಗಳು 100 - 200 ಮೀಟರ್ ಗಳಷ್ಟು ಕಡಿಮೆ ಅಂತರದಲ್ಲಿ ಇದೆ. ಇಲ್ಲಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ಆಗುವುದಿಲ್ಲ ಎನ್ನುವ ಅಳಲು ನಿರ್ವಾಹಕರದ್ದು.
ಸಂಸ್ಥೆ ಅಧಿಕಾರಿಗಳು ಮಾಡಿರುವ ಈ ತಾಂತ್ರಿಕ ಎಡವಟ್ಟಿನ ಕಾರಣದಿಂದ ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಸರಿಯಾದ ಸಮಯಕ್ಕೆ ಬಸ್‌ಗಳು ಸಂಚರಿಸದAತಾಗಿದೆ. ಇಲ್ಲಿ ಕರ್ತವ್ಯ ನಿರ್ವಹಿಸುವುದಕ್ಕಿಂತ ರಜೆ ಹಾಕುವುದೇ ಮೇಲು ಎಂದು ಕೆಲ ನಿರ್ವಾಹಕರು ರಜೆ ಹಾಕುತ್ತಿರುವುದರಿಂದ ಸಿಬ್ಬಂದಿ ಕೊರತೆ ಕಾರಣಕ್ಕೂ ಬಸ್‌ಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹೆಚ್ಚು ಪ್ರಯಾಣಿಕರು ಇರುವ ಅವಧಿಯಲ್ಲೇ ಬಸ್‌ಗಳು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಬುಧವಾರ ಬೆಳಗ್ಗೆ 7 ಗಂಟೆಗೆ ಕುಶಾಲನಗರದಿಂದ ಬಸ್ ಹೊರಟ ನಂತ 9 ಗಂಟೆ ತನಕ ಯಾವುದೇ ಸಾಮಾನ್ಯ ಬಸ್ ಈ ಮಾರ್ಗದಲ್ಲಿ ಸಂಚರಿಸದ ಕಾರಣ ಸಾಕಷ್ಟು ಪ್ರಯಾಣಿಕರು ಶಾಲೆ, ಕಾಲೇಜು, ಕಚೇರಿ ತಪ್ಪಿಸಿಕೊಳ್ಳುವಂತಾಗಿತ್ತು. ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಶಾಸಕ ಡಾ. ಮಂತರ್ ಗೌಡ ಅವರ ಅರಿವಿಗೆ ತರಲಾಗಿದೆ. ಆವರು ಸಂಸ್ಥೆಯ ಮೇಲಾಧಿಖಾರಿಗಳಿಗೆ ವಿಷಯ ತಲುಪಿಸಿದ್ದು, ಪರಿಹಾರ ದೊರಕುವ ನಿರೀಕ್ಷೆಯಲ್ಲಿ ನಿರ್ವಾಹಕರು ಇದ್ದಾರೆ.
ಕುಶಾಲನಗರ-ಮಡಿಕೇರಿ ಮಾರ್ಗದಲ್ಲಿ ಈಗಾಗಲೇ ಚಾಲನಾ ಸಿಬ್ಬಂದಿಗೆ ಹೊಸದಾಗಿ ಅಳವಡಿಸಿರುವ ಉಪ ಹಂತಗಳಲ್ಲಿ ತನಿಖಾಧಿಕಾರಿಗಳು ಇಳಿಯುವ ಪ್ರಯಾಣಿಕರನ್ನು ತಪಾಸಣೆ ಮಾಡದೆ ಬಸ್ಸಿನೊಳಗೆ ಹತ್ತಿ ಟಿಕೆಟ್ ವಿತರಣೆ ಮಾಡದವರಿಗೂ ಕೂಡ ಪ್ರಕರಣ ದಾಖಲಿಸುತ್ತಿದ್ದಾರೆ. ಹಾಗಾಗಿ ಈ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸಲು ತುಂಬಾ ಕಷ್ಟವಾಗುತ್ತಿದೆ. ಇಲ್ಲಿ ಬಸ್‌ಗಳು ನಿಗದಿತ ಅವಧಿಯಲ್ಲೇ ಸಂಚರಿಸುವAತಾಗಲು ಮತ್ತೊಮ್ಮೆ ಈ ಮಾರ್ಗದಲ್ಲಿ ಸರ್ವೆ ನಡೆಸಿ ಹೊಸದಾಗಿ ಅಳವಡಿಸಿರುವ ಉಪ ಹಂತಗಳನ್ನು ರದ್ದುಪಡಿಸಿ ಈ ಮೊದಲು ಇದ್ದ ಹಳೆಯ ಹಂತಗಳನ್ನು ಅಳವಡಿಸಿ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕಾಗಿದೆ.
ಹೆಸರು ಹೇಳಲು ಇಚ್ಛಿಸದ ನಿರ್ವಾಹಕ, ಮಡಿಕೇರಿ ಡಿಪೋ
2022ರಲ್ಲೇ ಸ್ಟೇಜ್‌ಗಳ ಪರಿಷ್ಕರಣೆ ಆಗಿದೆ. ಈಗ ಹೊಸ ಎಲೆಕ್ಟಾçನಿಕ್ ಟಿಕೆಟ್ ಮೆಷಿನ್ ಬಂದ ನಂತರ ಸಮಸ್ಯೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ಪರಿಹರಿಸಲು ಗಮನಹರಿಸಲಾಗಿದೆ. ಈಗಿನ ಯಂತ್ರದಲ್ಲಿ ಟಿಕೆಟ್ ವಿತರಣೆ ಮಾಡಲು ನಾಲ್ಕು ಬಾರಿ ಆಯ್ಕೆಗಳನ್ನು ಮಾಡಬೇಕಾಗಿರುತ್ತದೆ. ಆದರೆ ಈಗ ಇದರಲ್ಲಿ ಬದಲಾವಣೆ ಮಾಡಲಾಗುತ್ತಿದ್ದು, ಮೊದಲಿದ್ದಂತೆ 3 ಬಾರಿ ಮಾತ್ರ ಆಯ್ಕೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಎಲ್ಲಾ ಸಮಸ್ಯೆಗಳನ್ನೂ ಪರಿಶೀಲನೆ ನಡೆಸಲಾಗುತ್ತಿದೆ.
ಅಮರಲಿಂಗಯ್ಯ ಪಿ. ಹಾಸು ಪೂಜಾರಿ, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಪುತ್ತೂರು ವಿಭಾಗ