

ಬೆಂಗಳೂರು: ಎಂ. ಜಿ. ರಸ್ತೆ ಟ್ರಿನಿಟಿ ಸರ್ಕಲ್ನಲ್ಲಿ ಸೋಮವಾರ ಬ್ರೇಕ್ ವೈಫಲ್ಯದಿಂದ ಪೊಲೀಸ್ ಜೀಪ್ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಪಿಯಾಗಿದ್ದು, ಚಾಲಕನಿಗೆ ಗಾಯವಾಗಿದೆ.
ಸೋಮವಾರ ಬೆಳಗ್ಗೆ 10.45ರಲ್ಲಿ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಎಸ್ಆರ್ಪಿ ಚಾಲಕ ಶ್ರೀಧರ್, ಕೋರಮಂಗಲದಿಂದ ಹಲಸೂರು ಕಡೆ ಜೀಪ್ ಚಲಾಯಿಸಿಕೊಂಡು ಹೋಗುತ್ತಿದ್ದರು. ಎಎಸ್ಸಿ ಸೆಂಟರ್ ಮತ್ತು ಟ್ರಿನಿಟಿ ವೃತ್ತದ ನಡುವೆ ಹೋಗುತ್ತಿದ್ದಾಗ ಏಕಾಏಕಿ ಅಡ್ಡ ಬಂದ ಬೈಕ್ ತಪ್ಪಿಸಲು ಬ್ರೇಕ್ ತುಳಿದು ಸ್ಟೇರಿಂಗ್ ತಿರುಗಿಸಿದ್ದಾರೆ.
ಜೀಪ್ ರಸ್ತೆ ಬದಿಯಲ್ಲಿನ ವಿದ್ಯುಕ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನಂತರ ಕಾರೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತಕ್ಕೆ ಒಳಗಾದ ಕಾರು ಸಿಸಿಬಿ ಡಿಸಿಪಿ ಕುಲ್ದೀಪ್ ಜೈನ್ ಕುಟುಂಬದ ಬಳಕೆಗೆ ಒದಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.