ಮುಕ್ತ ವಿ.ವಿ. ಪ್ರವೇಶಾತಿಗೆ ಪೂರ್ವ ಸಮಾಲೋಚನೆ

ksou new
Published on

ಚಾಮರಾಜನಗರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೊಳ್ಳೇಗಾಲ ಪ್ರಾದೇಶಿಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಜುಲೈಯಲ್ಲಿ ನಡೆಯುವ ಪ್ರವೇಶಾತಿಗಳ ಕುರಿತು ಜೂ.28 ಮತ್ತು 29 ರಂದು ಬೆಳಿಗ್ಗೆ 10.30 ರಿಂದ ಸಂಜೆ 5 ಗಂಟೆಯವರೆಗೆ ಪ್ರವೇಶಾತಿ ಪೂರ್ವ ಸಮಾಲೋಚನ ನಡೆಯಲಿದೆ.

ದೂರ ಶಿಕ್ಷಣ ಅಡಿಯಲ್ಲಿ ಪ್ರವೇಶಾತಿ ಬಯಸುವ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳ ವಯೋಮಿತಿ ಇಲ್ಲದೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಲಭ್ಯವಿರುವ ಸ್ನಾತಕ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಬಿ.ಎ. ಬಿ.ಸಿ.ಎ, ಬಿ.ಎಸ್ಸಿ, ಬಿ.ಎಸ್.ಡಬ್ಲೂೃ, ಸ್ನಾತಕೋತ್ತರ ಪದವಿಗಳಾದ ಎಂ.ಎ, ಎಂಕಾಂ, ಎಂ.ಬಿ.ಎ, ಎಂ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲೂೃ, ಪದವಿಗಳು ಹಾಗೂ ಡಿಪ್ಲೊಮಾ, ಪಿ.ಜಿ. ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳಲ್ಲಿ ಪ್ರವೇಶಾತಿ ಪಡೆಯ ಬಹುದಾಗಿದೆ. ಪ್ರವೇಶಾತಿ ಪೂರ್ವ ಸಮಾಲೋಚನ ಕಾರ್ಯಕ್ರಮಕ್ಕೆ ಮೂಲ ದಾಖಾಲಾತಿಗಳ ನಕಲು ಪ್ರತಿಗಳ ಜೊತೆಗೆ ಹಾಜರಾಗಿ ಆಸಕ್ತಿ ಇರುವ ಕೋರ್ಸ್‌ಗಳ ಬಗ್ಗೆ ಸಿಬ್ಬಂದಿ ಜತೆ ಸಮಾಲೋಚನ ನಡೆಸಿ ಮಾಹಿತಿಯನ್ನು ಪಡೆಯಬಹುದು ಮತ್ತು ಪ್ರವೇಶಾತಿ ಪೂರ್ವ ನೋಂದಣಿಯನ್ನು ಸಹ ಮಾಡಬಹುದಾಗಿದೆ ಎಂದು ಕೊಳ್ಳೇಗಾಲ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಎನ್. ಧನಲಕ್ಷ್ಮೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net