ಕೆಎಸ್‌ನ ಮನೆ ರಾಷ್ಟ್ರೀಯ ಸ್ಮಾರಕವಾಗಬೇಕು

15-kkr1(2-25
Published on

ಕಿಕ್ಕೇರಿ : ಕವಿತಾ ಗುಚ್ಛದ ಮೂಲಕ ದಾಂಪತ್ಯವನ್ನು ಗಟ್ಟಿಗೊಳಿಸಿದ ಕವಿ ಕೆ.ಎಸ್. ನರಸಿಂಹಸ್ವಾಮಿ ಅವರ ಮನೆ ರಾಷ್ಟ್ರೀಯ ಸ್ಮಾರಕವಾಗಬೇಕು ಎಂದು ಕೆ.ಎಸ್.ನ. ಟ್ರಸ್ಟ್ ಸದಸ್ಯ ಸುರೇಶ್ ಹೇಳಿದರು.

ಕಿಕ್ಕೇರಿ ಮೂಲದ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನೂತನ ಸದಸ್ಯರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಕೆಎಸ್‌ನ ಹುಟ್ಟಿದ ಮನೆ ಮಾದರಿ ಸ್ಮಾರಕವಾಗಬೇಕು. ಕಾವ್ಯ ಸ್ಫೂರ್ತಿಗೆ ಸೆಲೆಯಾಗಿದ್ದ ತಾಣವನ್ನು ಕೆಎಸ್‌ನ ಸರೋವರ ಎಂದು ನಾಮಕರಣ ಮಾಡಬೇಕು. ವಾಕಿಂಗ್, ಜಾಗಿಂಗ್ ಪಥ, ಬೋಟಿಂಗ್ ವ್ಯವಸ್ಥೆ, ಬಯಲುರಂಗಮಂದಿರ, ಗ್ರಾಮದ 4ದಿಕ್ಕಿನಲ್ಲಿ ಸ್ವಾಗತ ಕಮಾನು ನಿರ್ಮಾಣ ವಾಗಬೇಕಿದೆ. ಟ್ರಸ್ಟ್ ಸಭೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಶ್ರಮಿಸಬೇಕು ಎಂದರು. ಕೆಎಸ್‌ನ ನಾಡಿನ ಬಲುದೊಡ್ಡ ಅಸ್ಮಿತೆ. ಟ್ರಸ್ಟ್ ಸಾಹಿತ್ಯಾತ್ಮಕವಾಗಿ ಕೆಲಸ ಮಾಡಿದೆ. ಈಗ ಬೇಕಿರುವುದು ಭೌತಿಕ ಕಾರ್ಯ. ಕೆಎಸ್‌ನ ನೆನಪು ಉಳಿಯಲು ಮೊದಲು ಟ್ರಸ್ಟ್ ಕಚೇರಿ, ತದನಂತರ ಚಟುವಟಿಕೆ. ರಾಜಕೀಯ ಇಲ್ಲಿ ಸಲ್ಲದು ಎಂದರು.

ಸರ್ಕಾರದ ಮಟ್ಟದಲ್ಲಿ ಒತ್ತಡ ತರಬೇಕು: ನಮ್ಮೂರು ಕವಿಯನ್ನು ವಿಶ್ವಮಟ್ಟದಲ್ಲಿ ಕಾಣಬೇಕಿದೆ. ಇರುವ ಅವಧಿಯಲ್ಲಿ ಉತ್ತಮ ಕೆಲಸ ಮಾಡಿ ಯುವಕರಲ್ಲಿ ಕನ್ನಡ ಸಾಹಿತ್ಯ ಪರಂಪರೆ ಗಟ್ಟಿಗೊಳಿಸುವ ಕೆಲಸಕ್ಕೆ ಟ್ರಸ್ಟಿಗಳು ಸಹಕಾರ ಸದಾ ಇರಬೇಕು. ಟ್ರಸ್ಟ್‌ಗೆ ಅನುದಾನ ತರಲು ಸರ್ಕಾರಕ್ಕೆ ಮನವಿ, ಒತ್ತಡ ತರಬೇಕಿದೆ ಎಂದು ಸುರೇಶ್ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net