ಕೊಪ್ಪಳ: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಸಮುದಾಯ ಅಭಿವೃದ್ಧಿ ಯೋಜನೆಯಡಿ ಪ್ರಸ್ತಾವನೆ ಆಹ್ವಾನಿಸಲಾಗಿದೆ.
ಚರ್ಚ್ ನವೀಕರಣ, ಆವರಣ ಗೋಡೆ, ಸ್ಮಶಾನ ಗೋಡೆ, ಸಮುದಾಯ ಭವನ, ಅನಾಥಾಶ್ರಮ, ವೃದ್ಧಾಶ್ರಮ ನಿರ್ಮಾಣ, ಜೈನ ಬಸೀದಿ ನವೀಕರಣ, ದುರಸ್ಥಿ, ಜೀಣೋರ್ದ್ಧಾರ, ಸಮುದಾಯ ಭವನ ನಿಮಾರ್ಣ. ಸಿಖ್ ಮತ್ತು ಬೌದ್ಧ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಬೌದ್ಧ ವಿಹಾರಗಳ ದುರಸ್ಥಿ, ನವೀಕರಣ ಕಾಮಗಾರಿ ಕೈಗೊಳ್ಳಲು ಮತ್ತು ಸಹಾಯನುದಾನ ಪಡೆಯಲು ಇಚ್ಚಿಸುವ ಅರ್ಹ ಸಂಸ್ಥೆಯವರು ಪ್ರಸ್ತಾವನೆ ಸಲ್ಲಿಸಬಹುದು. ಮಾಹಿತಿಗಾಗಿ ದೂ.ಸಂ:08539-&225070ಗೆ ಸಂಪರ್ಕಿಸಬಹುದೆಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.