ಗುರಿ ತಲುಪಲು ಪರಿಶ್ರಮ ಅಗತ್ಯ,  ಕಾನೂನು ವಿವಿ ಸ್ವಾಗತ ಸಮಾರಂಭದಲ್ಲಿ ಕುಲಪತಿ ಅಭಿಮತ

IMG_20251025_210310_822-1.jpg
Published on

ಹುಬ್ಬಳ್ಳಿ: ಕನಸುಗಳನ್ನು ಹೊತ್ತು ಸಹಸ್ರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕಾನೂನು ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದಿರುವುದು ಸಂತೋಷದ ಸಂಗತಿ. ಪರಿಶ್ರಮವಿಲ್ಲದೆ ಕನಸು ನನಸಾಗಲು ಸಾಧ್ಯವಿಲ್ಲ. ಗುರಿ ಮುಟ್ಟುವವರೆಗೂ ಪರಿಶ್ರಮ ಅಗತ್ಯ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ. ಸಿ. ಬಸವರಾಜು ಹೇಳಿದರು.

ಇಲ್ಲಿಯ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಶಾಲೆಯಲ್ಲಿ ಶನಿವಾರ 2025- 26ನೇ ಶೈಣಿಕ ಸಾಲಿನ ವಿದ್ಯಾರ್ಥಿಗಳ ಸಂಘ ಜಿಮ್ಖಾನಾ, ಎನ್ಎಸ್ಎಸ್, ರೆಡ್ ಕ್ರಾಸ್, ಕಾನೂನು ಸೇವಾ, ಕ್ರೀಡಾ ಚಟುವಟಿಕೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ
ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತರ ವಿದ್ಯಾರ್ಥಿಗಳಿಗಿಂತ ಕಾನೂನು ಕ್ಷೇತ್ರದ ವಿದ್ಯಾರ್ಥಿಗಳು ಸಮಾಜದ ಒಳಿತಿನ ಗುರುತರ ಜವಾಬ್ದಾರಿಯನ್ನೂ ಹೊಂದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಶಿಕರ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ನಶಿಸಿ ಹೋಗುತ್ತಿದ್ದು, ನೀವೆಲ್ಲ ಉತ್ತಮ ಶಿಕ್ಷಣದೊಂದಿಗೆ ಉತ್ತಮ ಸಂಸ್ಕ್ರತಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗಬಲ್ಲದು ಎಂದರು.

ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಸಿಗಳನ್ನು ಕೊಡುಗೆಯಾಗಿ ನೀಡಿ ಭವಿಷ್ಯವನ್ನು ಹೆಮ್ಮರವಾಗಿ ರೂಪಿಸಿಕೊಳ್ಳಲು ಸಲಹೆ ನೀಡಿದರು.

ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡ್ರ ಮಾತನಾಡಿ, ಐದು ವರ್ಷಗಳ ಕಾಲ ವಿದ್ಯಾರ್ಥಿಗಳು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಅಧ್ಯಯನ ಮಾಡಿದರೆ ವೃತ್ತಿಯಲ್ಲಿ ಶ್ರೇಷ್ಠನಾಗಿ ಬೆಳೆಯಬಹುದು. ಪ್ರತಿ ವಿದ್ಯಾರ್ಥಿಯು ಉನ್ನತ ಕನಸುಗಳನ್ನು ಕಾಣುವುದರೊಂದಿಗೆ ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಸತಜೆಯಾಗಿ ಜನರ ಹಿತ ಕಾಯಬಹುದು ಎಂದರು.

ಕುಲಸಚಿವೆ ಗೀತಾ ಕೌಲಗಿ, ಹಣಕಾಸು ಅಧಿಕಾರಿ ಸಂಜೀವಕುಮಾರ ಸಿಂಗ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಉಪಸ್ಥಿತರಿದ್ದರು. ಸ್ವರಿತಾ ಎಸ್ತಾರ್ ಸ್ವಾಗತಿಸಿದರು, ಆಕಾಶದೀಪ ವಂದಿಸಿದರು, ಅಂಕಿತಾ ನಾಯ್ಕ ಪ್ರಾರ್ಥಿಸಿದರು. ಅನನ್ಯ ಕೊಲ್ಹಾರ್ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net