ಸಿದ್ದಾಪುರ: ತಾಲೂಕಿನಾದ್ಯಂತ ನಾಗರ ಪಂಚಮಿಯನ್ನು ಶ್ರದ್ಧಾ-ಭಕ್ತಿಯಿಂದ ಸೋಮವಾರ ಆಚರಿಸಲಾಯಿತು. ತಾಲೂಕಿನ ಪ್ರತಿಯೊಂದು ಊರಿನಲ್ಲಿರುವ ನಾಗರಬನದಲ್ಲಿ ನಾಗರಕಲ್ಲಿಗೆ ವಿಶೇಷವಾಗಿ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಸೇರಿ ವಿವಿಧ ಅಭಿಷೇಕ ನೆರವೇರಿಸಿ ನಂತರ ವಿವಿಧ ಪುಷ್ಪಗಳಿಂದ ಶೃಂಗರಿಸಿ ವಿಶೇಷ ಪೂಜೆ ಸಲ್ಲಿಸಿದರು.