

ಬೆಂಗಳೂರು: ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ(ಕೆಎಸ್‌ಬಿಡಿಬಿ) ದೇಶದ ಹೊರಗೂ ತನ್ನ ಕಾರ್ಯಾಚರಣೆ ವಿಸ್ತರಿಸುವ ಉದ್ದೇಶ ಹೊಂದಿದೆ(KSBDB operations outside the country) ಎಂದು ಮಂಡಳಿ ಅಧ್ಯಕ್ಷ ಎಸ್.ಇ.ಸುಧೀಂದ್ರ(S E Sudhindra) ತಿಳಿಸಿದರು.
ಮೈಸೂರಿನಲ್ಲಿ ನಡೆದ ಇಂಟರ್ ನ್ಯಾಷನಲ್ ಕಾನ್‌ಕ್ಲೇವ್ ಮತ್ತು ಸಸ್ಟೆನಬಲ್ ಟೆಕ್ನಾಲಜೀಸ್ ಸಮಿಟ್ ಉದ್ದೇಶಿಸಿ ಮಾತನಾಡಿದರು.
ಬಯೋ ಎನರ್ಜಿ ವಲಯದಲ್ಲಿ ಕೆಲವೇ ತಿಂಗಳಲ್ಲಿ ಭಾರಿ ಹೂಡಿಕೆಗಳನ್ನು ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜೈವಿಕ ಇಂಧನ ವಲಯದ ಉದ್ಯಮದ ಉನ್ನತಿಗೆ ಉತ್ಸುಕವಾಗಿದೆ ಎಂದು ಹೇಳಿದರು.
ಇನ್ವೆಸ್ಟ್ ಕರ್ನಾಟಕದಲ್ಲೂ ಜೈವಿಕ ಇಂಧನ ಉದ್ಯಮಕ್ಕೆ ಆದ್ಯತೆ ನೀಡಲಾಗಿದೆ. ಹೆಚ್ಚಿನ ಬಳವಾಳ ಹರಿದು ಬರುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅಳವಡಿಸಲಾದ ಜೈವಿಕ ಇಂಧನ ಚಟುವಟಿಕೆಗಳನ್ನು ಸಮಾವೇಶದಲ್ಲಿ ಪ್ರದರ್ಶಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಜೈವಿಕ ಇಂಧನ ಅಭಿವೃದ್ಧಿಗೆ ಹೊಸ ಆಯಾಮವನ್ನು ತರುವ ಕರ್ನಾಟಕದ ಪ್ರಯತ್ನಗಳನ್ನು ಜರ್ಮನಿ ವಿಶ್ವವಿದ್ಯಾಲಯಗಳು ಶ್ಲಾಸಿದವು.
ವಿಶ್ವವಿದ್ಯಾಲಯ, ವಿಶ್ವವಿದ್ಯಾಲಯದ ಪ್ರತಿನಿಧಿ ತಂಡಗಳು, ಪ್ರೊ. ಕ್ರಿಸ್ಟ್ೋ ಹರಾಚ್, ಡಾ.ಸ್ಟೀಫನ್ ವೆಯರ್ಸ್ ಮತ್ತಿತರರು ಬಯೋ ಎನರ್ಜಿ ಚಟುವಟಿಕೆಗಳ ತಂಡದೊಂದಿಗೆ ಸಂವಾದ ನಡೆಸಿದರು.
ಮಂಡಳಿಯು ಜಾರಿಗೊಳಿಸಿದ ಬೂಫ್ಯುಯಲ್ ಕಾರ್ಯಕ್ರಮವನ್ನು ಶ್ಲಾಘಿಸಿದರಲ್ಲದೆ, ಒಂದು ದಶಕದ ಹಿಂದೆಯೇ ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿ-2009 ಘೋಷಿಸಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದರು.
ದೇಶದಲ್ಲೇ ಮೊದಲ ಬಾರಿಗೆ ಬಯೋ ಎನರ್ಜಿ ರೀಸರ್ಚ್ ಮತ್ತು ಕ್ವಾಲಿಟಿ ಅಶ್ಯೂರೆನ್ಸ್ ಲ್ಯಾಬೋರೇಟರಿಗೆ ವಿಶ್ವವಿದ್ಯಾಲಯದ ಪ್ರತಿನಿಧಿಗಳು ಭೇಟಿ ನೀಡಿದರು. ಜೈವಿಕ ಇಂಧನಗಳ ಪರೀಕ್ಷೆ ಮತ್ತು ಪ್ರಮಾಣೀಕರಣ, ಎಸ್‌ಒಪಿ ಬಗ್ಗೆ ಮಾಹಿತಿ ಪಡೆದುಕೊಂಡರು.
ಕೆಎಸ್‌ಬಿಡಿಬಿ ತಂಡವನ್ನು ಜರ್ಮನಿಗೆ ಭೇಟಿ ನೀಡಲು ಆಹ್ವಾನಿಸಿದರು. ಜೊತೆಗೆ ಪರಸ್ಪರ ಕೆಲಸ ಮಾಡುವ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಜರ್ಮನ್ ಪ್ರತಿನಿಧಿಗಳು, ಜೈವಿಕ ಇಂಧನ ಮಂಡಳಿಯ ಎಲ್ಲ ಚಟುವಟಿಕೆಗಳೊಂದಿಗೆ ಕೈಜೋಡಿಸು ಒಡಂಬಡಿಕೆಗೆ ಸಹಿ ಹಾಕುವ ಇಚ್ಛೆ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯದ ಜೈವಿಕ ಇಂಧನ ಕ್ಷೇತ್ರದಲ್ಲಿ 1 ಲಕ್ಷ ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಹೂಡಿಕೆಯ ಅವಕಾಶವನ್ನು ಬಳಸಿಕೊಳ್ಳಲು ಹಾಗೂ ಜೈವಿಕ ಇಂಧನ ಕ್ಷೇತ್ರದಲ್ಲಿ ಬೃಹತ್ ಹೂಡಿಕೆಯನ್ನು ತರುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು.