ನಾಡು-ನುಡಿಯ ರಕ್ಷಣೆಗೆ ಕಸಾಪ ಸ್ಥಾಪನೆ

KSAPA established to protect language
ರಬಕವಿಯಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 111ನೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ಜಿಲ್ಲಾ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಮಲ್ಲೇಶಪ್ಪ ಶಿ. ಕುಚನೂರ, ರಬಕವಿ ಸೋಮಶೇಖರ ದು. ಕೊಟ್ರಶೆಟ್ಟಿ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಸಂತೋಷ ಆಲಗೂರ ಅವರನ್ನು ಸನ್ಮಾನಿಸಲಾಯಿತು. ಮ.ಕೃ. ಮೇಗಾಡಿ, ಎಂ. ಎಸ್. ದಬಾಡಿ, ಬಸವರಾಜ ಬಿಲವಡಿ ಇದ್ದರು.
Published on

ರಬಕವಿ/ ಬನಹಟ್ಟಿ: ನಾಡು ನುಡಿಯ ಸಂರಕ್ಷಣೆ, ಕನ್ನಡ ಪುಸ್ತಕಗಳನ್ನು ಪ್ರಕಟಿಸುವುದು, ಜನಮಾನಸದಲ್ಲಿ ಕನ್ನಡ ಹಿರಿಮೆ ಗರಿಮೆಗಳನ್ನು ತಿಳಿಸಿ, ಕನ್ನಡ ಜಾಗೃತಿಯನ್ನುಂಟು ಮಾಡುವ ಉದ್ಧೇಶದೊಂದಿಗೆ 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಇಂದಿಗೆ 111ನೇ ವರ್ಷದತ್ತ ದಾಪುಗಾಲು ಹಾಕುತ್ತಿದೆ ಎಂದು ರಬಕವಿ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ಬಿ.ಎಂ. ಮಟ್ಟಿಕಲ್ಲಿ ಹೇಳಿದರು.

ರಬಕವಿಯ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ 111ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕನ್ನಡ ನಾಡು ನುಡಿಗಾಗಿ ಕಾರ್ಯಕ್ರಮಗಳ ಆಯೋಜನೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಇನ್ನೂ ಹೆಚ್ಚು ಅರ್ಥವತ್ತಾಗಿ ಆಯೋಜಿಸುವ ಅಗತ್ಯವಿದೆ. ಕನ್ನಡ ಭಾಷೆ ನಗರಗಳಿಗಿಂತ ಹೆಚ್ಚಾಗಿ ಗ್ರಾಮೀಣ ಭಾಗದ ಜನರಿಂದ ಉಳಿದುಕೊಂಡಿದೆ ಎಂದರು.

ನಾಡಿನ ತುಂಬ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಹಾಗೂ ರಬಕವಿಯಲ್ಲಿ ನಡೆದ ಅಖಿಲ ಭಾರತ 28ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದುಡಿದ ಮಹನೀಯರನ್ನು ಸ್ಮರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮ. ಕೃ. ಮೇಗಾಡಿ ಅಧ್ಯಕ್ಷತೆ ವಹಿಸಿ ನಾತನಾಡಿ, ಮೇ.11ರಂದು ಪುಸ್ತಕಾವಲೋಕನ 41 ಕಾರ್ಯಕ್ರಮ ರಬಕವಿಯಲ್ಲಿ ನಡೆಯಲಿದೆ ಎಂದರು.

ರಬಕವಿ ವ್ಯಾಪಾರಸ್ಥ ಬಸವರಾಜ ಬಿಲವಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಬಸವಶ್ರೀ ಪ್ರಶಸ್ತಿ ಪುರಸ್ಕೃತರಾದ ಮಲ್ಲೇಶಪ್ಪ ಶಿ. ಕುಚನೂರ, ರಬಕವಿ ಸೋಮಶೇಖರ ದು. ಕೊಟ್ರಶೆಟ್ಟಿ, ಕಾಯಕಯೋಗಿ ಪ್ರಶಸ್ತಿ ಪುರಸ್ಕೃತ ಸಂತೋಷ ಆಲಗೂರ ಅವರನ್ನು ಸನ್ಮಾನಿಸಲಾಯಿತು.

ಸಾಮಾಜಿಕ ಕಾರ್ಯಕರ್ತ ಪ್ರಭು ಪೂಜಾರಿ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದರು. ಅರ್ಥಶಾಸ್ತ್ರ ನಿವೃತ್ತ ಉಪನ್ಯಾಸಕ ಎಂ.ಎಸ್. ಬಾದಾಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಜಿ.ಎಸ್. ವಡಗಾಂವಿ, ಬಸವರಾಜ ಬುಟ್ಟಣ್ಣವರ, ಎಸ್.ಎಸ್. ಕಮತಗಿ, ಶಿವಾನಂದ ಬಾಗಲಕೋಟಮಠ, ಕಲಾವಿದ ಈರಪ್ಪ ಮನ್ಮಿ, ಮಲ್ಲಪ್ಪ ಗಣಿ, ಡಿ.ಬಿ.ಜಾಯಗೊಂಡ, ಶಶಿಕಾಂತ ಶಿರಗಾಂವಿ, ಈರಣ್ಣ ಗುಗ್ಗರಿ, ಈರಣ್ಣ ಗಣಮುಖಿ, ಶರತ್ ಜಂಬಗಿ ಮತ್ತಿತರರಿದ್ದರು.

ಕಸಾಪ ತಾಲೂಕು ಪ್ರತಿನಿಧಿ, ಹಿರಿಯ ಕಲಾವಿದ ಶ್ರೀಶೈಲ ಪಟ್ಟಣಶೆಟ್ಟಿ ಲಾವಣಿಗೀತೆ ಹಾಡಿದರು. ಮಹಾಲಿಂಗಪುರ ವಲಯ ಕಸಾಪ ಅಧ್ಯಕ್ಷ ಬಸವರಾಜ ಮೇಟಿ ಸ್ವಾಗತಿಸಿದರು. ವಿನೋದ ಸಾಹಿತಿ ಮೃತ್ಯುಂಜಯ ರಾಮದುರ್ಗ ನಿರೂಪಿಸಿದರು. ಶಿಕ್ಷಕ ಎಂ.ಎಸ್.ಗಡೆನ್ನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net