ಕೆ.ಎಸ್.ಈಶ್ವರಪ್ಪಗೆ ಮತ್ತೆ ಡಿಸಿಎಂ ನೀಡಿ: ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಒತ್ತಾಯ

Yarigouda Ballari Kuruba Sanga President
ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ.
Published on

ಬಳ್ಳಾರಿ: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಡಿಸಿಎಂ ಹಾಗೂ ಸಮುದಾಯದ ಐವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎರ್ರಿಗೌಡ ಒತ್ತಾಯಿಸಿದರು.

ರಾಜ್ಯದಲ್ಲಿ ಬಿಜೆಪಿ ಬಲಪಡಿಸುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಕೆ.ಎಸ್.ಈಶ್ವರಪ್ಪ ಶ್ರಮಿಸಿದ್ದಾರೆ. ಬೇರೆ ಮಂತ್ರಿಗಳು ಪಕ್ಷಬಿಟ್ಟು ಮತ್ತೆ ಮರಳಿದ್ದಾರೆ. ಅಂತಹವರಿಗೆ ಕೂಡ ಕಳೆದ ಸಂಪುಟದಲ್ಲಿ ದೊಡ್ಡ ಸ್ಥಾನ ನೀಡಲಾಗಿತ್ತು. ಅದರೆ, ಈವರೆಗೆ ಈಶ್ವರಪ್ಪ ಪಕ್ಷ ತೊರೆದಿಲ್ಲ. ಅವರಿಗೆ ಸಿಎಂ ಸ್ಥಾನ ಸಿಗುವ ನಿರೀಕ್ಷೆ ಇತ್ತು. ಆದರೆ, ಕೆಲ ಕಾರಣಾಂತರಗಳಿಂದ ಅದು ಕೈ ತಪ್ಪಿದೆ. ಹಿಂದುಳಿದ ವರ್ಗದ ಪೈಕಿ ಕುರುಬ ಸಮುದಾಯ ಬಹುದೊಡ್ಡ ಸಮುದಾಯವಾಗಿದೆ. ಆದ್ದರಿಂದ ಸಮುದಾಯಕ್ಕೆ ಪ್ರಾಶಸ್ತ್ಯ ನೀಡಲು ಈಶ್ವರಪ್ಪಗೆ ಡಿಸಿಎಂ ಹಾಗೂ ಐವರನ್ನು ಸಚಿವರನ್ನಾಗಿ ನೇಮಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಂಘದ ಮುಖಂಡರಾದ ಎ.ಮಲ್ಲೇಶ್ವಪ್ಪ, ಕೆ.ಮೋಹನ್, ಹೊನ್ನೂರಸ್ವಾಮಿ, ಬಿ.ವೀರೇಶಪ್ಪ, ಟಿ.ರಾಮಲಿಂಗಪ್ಪ, ಸುರೇಂದ್ರ, ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net